ಬೆಂಗಳೂರು: ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆ ವಿರೋಧಿಸಿ ರೈತರು ನಡೆಸುತ್ತಿರುವ ಬಾರುಕೋಲು ಚಳುವಳಿ ನಿರ್ಧಾರ ಕೈಬಿಟ್ಟು ಚರ್ಚೆಗೆ ಬನ್ನಿ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರೈತ ಮುಖಂಡರಿಗೆ ಆಹ್ವಾನಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಸಿಎಂ, ದಿನ ನಿತ್ಯ ಒಂದಿಲ್ಲೊಂದು ಪ್ರತಿಭಟನೆ ನಡೆಸುತ್ತಾ ಹೋಗುವುದು ಸರಿಯಲ್ಲ. ಚಳುವಳಿ, ಹೋರಾಟಗಳನ್ನು ಕೈಬಿಟ್ಟು ರೈತ ಮುಖಂಡರು ಚರ್ಚೆಗೆ ಬರಲಿ ಎಂದರು.
ರೈತರ ಬಗ್ಗೆ ರೈತ ಮುಖಂಡರಿಗಿಂತಲೂ ಹೆಚ್ಚು ಕಾಳಜಿ ಬಿಜೆಪಿ ಪಕ್ಷಕ್ಕೆ ಹಾಗೂ ಪ್ರಧಾನಿ ಮೋದಿಯವರಿಗಿದೆ. ಅದಕ್ಕಾಗಿಯೇ ರೈತರಿಗೆ ಅನುಕೂಲವಾಗಲಿ, ಅವರ ಆದಾಯ ಹೆಚ್ಚಾಗಲಿ ಎಂಬ ಕಾರಣಕ್ಕೆ ಈ ಕಾಯ್ದೆ ಜಾರಿಗೆ ತಂದಿದ್ದಾರೆ ಎಂದು ಹೇಳಿದರು. ಪ್ರತಿಭಟನೆಗಳನ್ನು ನಡೆಸುವುದು ಸರಿಯಲ್ಲ, ಮೊದಲು ಪ್ರತಿಭಟನೆ ಬಿಟ್ಟು ಮಾತುಕತೆಗೆ ಬನ್ನಿ ಎಂದು ಕರೆ ನೀಡಿದರು.