ನದಿಗೆ ನಾಣ್ಯ ಎಸೆಯಬೇಕು ಎಂದು ನಾಟಕವಾಡಿ ಕಾರ್ ನಿಲ್ಲಿಸಲು ಹೇಳಿದ ಯುವತಿಯೊಬ್ಬಳು ಪೋಷಕರ ಕಣ್ಮುಂದೆಯೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಘಟನೆ ನಡೆದಿರೋದು ವಿಜಯಪುರದಲ್ಲಿ.
ವಿಜಯಪುರದ ಆಲಮೇಲ ಮತ್ತು ಕಲಬುರಗಿಯ ಅಫಜಲಪುರ ತಾಲೂಕಿನ ನಡುವೆ ಭೀಮಾನದಿಗೆ ಅಡ್ಡಲಾಗಿ ಕಟ್ಟಿದ್ದ ಸೇತುವೆ ಬಳಿ ಈ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಯುವತಿಯನ್ನು ಧಾರವಾಡದ ನವಲಗುಂದ ಪಟ್ಟಣದ ನಿವಾಸಿ ಐಶ್ವರ್ಯ ಶ್ರೀಪಾಲ ಕಬ್ಬಿನ ಎಂದು ಗುರುತಿಸಲಾಗಿದೆ. ಈಕೆ ತನ್ನ ಕುಟುಂಬಸ್ಥರ ಜೊತೆಯಲ್ಲಿ ಗಾಣಗಾಪುರ ದತ್ತಾತ್ರೆಯ ದೇವಸ್ಥಾನಕ್ಕೆ ಹೊರಟಿದ್ದಳು. ಈ ವೇಳೆ ನದಿಗೆ ನಾಣ್ಯ ಹಾಕಬೇಕು ಎಂದು ಹೇಳಿ ಸೇತುವೆ ಬಳಿ ಕಾರು ನಿಲ್ಲಿಸಲು ಹೇಳಿದ್ದಾಳೆ. ಕಾರು ನಿಲ್ಲಿಸಿದ ಬಳಿಕ ಸೇತುವೆ ಬಳಿ ಹೋಗಿ ನದಿಗೆ ಜಿಗಿದಿದ್ದಾಳೆ.
ಈಕೆಯ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ. ಈಕೆಯ ಆತ್ಮಹತ್ಯೆಗೆ ಕಾರಣ ಏನು ಎಂಬುದು ತನಿಖೆಯಿಂದ ಬಯಲಾಗಬೇಕಿದೆ. ಅದೇನೆ ಇರಲಿ, ತನ್ನ ಪೋಷಕರ ಮುಂದೆಯೇ ನದಿಗೆ ಹಾರಿ ಜೀವ ಬಿಟ್ಟ ಯುವತಿ ಸಾವಿಗೆ ಕಾರಣ ತಿಳಿದು ಬಂದಿಲ್ಲ.