ದಾವಣಗೆರೆ: ರಾಜ್ಯದ ಪೊಲೀಸ್ ಕಾನ್ಸ್ಟೇಬಲ್ ಒಬ್ಬ ಪಾಕಿಸ್ತಾನದ ಪರವಾದ ಪ್ರೇಮಹೊಂದಿದ್ದು, ಪವರ್ ಆಫ್ ಪಾಕಿಸ್ತಾನ ಎಂಬ ಪೋಸ್ಟ್ ನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಇದೀಗ ಪೊಲೀಸ್ ಪೇದೆ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ.
ದಾವಣಗೆರೆಯ ಬಸವನಗರ ಠಾಣೆಯ ಕಾನ್ಸ್ ಟೇಬಲ್ ಸನಾವುಲ್ಲಾ ಪಾಕ್ ಪರ ಪ್ರೇಮ ಹೊಂದಿರುವ ಪೊಲೀಸ್ ಪೇದೆ. ಪವರ್ ಆಫ್ ಪಾಕಿಸ್ತಾನ ಎಂದು ವಾಟ್ಸಪ್ ನಲ್ಲಿ ಪೇಜ್ ಹಂಚಿಕೊಂಡಿದ್ದಾನೆ. ಅಲ್ಲದೇ ಪಾಕ್ ಪರವಾದ ಹಲವು ಕಮೆಂಟ್ ಗಳನ್ನು ಮಾಡಿದ್ದಾನೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ದಾವಣಗೆರೆ ಎಸ್ ಪಿ ತನಿಖೆಗೆ ಆದೇಶಿಸಿದ್ದಾರೆ.
ಸನಾವುಲ್ಲಾನ ಪಾಕ್ ಪರ ಪ್ರೇಮ ಇದು ಹೊಸದಲ್ಲ. ಈ ಹಿಂದೆ 2014ರಲ್ಲಿಯೂ ಇದೇ ರೀತಿ ಮಾಡಿ ಸಸ್ಪೆಂಡ್ ಆಗಿದ್ದ ಎನ್ನಲಾಗಿದೆ.