ಡ್ರಗ್ಸ್ ಪ್ರಕರಣದ ಆರೋಪಿಗಳ ಪೈಕಿ ಒಬ್ಬನಾದ ವೈಭವ್ ಜೈನ್ ಪತ್ನಿಗೆ ಕರೆ ಮಾಡುವುದಾಗಿ ಹೇಳಿ ಪೊಲೀಸರಿಂದ ಮೊಬೈಲ್ ಪಡೆದು ಗೆಳತಿಗೆ ಕರೆ ಮಾಡಿರುವ ಸಂಗತಿ ಈಗ ಬಹಿರಂಗವಾಗಿದೆ.
ತನ್ನ ವಿವಾಹ ವಾರ್ಷಿಕೋತ್ಸವವಿದ್ದು, ಪತ್ನಿಗೆ ಶುಭ ಕೋರುವುದಕ್ಕೆ ವೈಭವ್ ಜೈನ್ ಹೇಳಿದಾಗ ಇದನ್ನು ನಂಬಿದ ಪೊಲೀಸರು ಫೋನ್ ನೀಡಿದ್ದರು. ವೈಭವ್ ಜೈನ್ ಕೆಲ ಹೊತ್ತು ಫೋನ್ ನಲ್ಲಿ ಮಾತನಾಡಿದ್ದ.
ಇದಾದ ಮರುದಿನವೇ ವೈಭವ್ ಜೈನ್ ಪತ್ನಿ, ಪತಿಯನ್ನು ನೋಡಲು ಬಂದಿದ್ದಾರೆ. ಆಗ ಪೊಲೀಸರು ನಿಮಗೆ ಕರೆ ಮಾಡಿದ್ದರಲ್ವ ಎಂದಾಗ ಆಕೆ ಇಲ್ಲ ಎಂದು ಉತ್ತರಿಸಿದ್ದಾರೆ.
ಆಗ ಗಲಿಬಿಲಿಗೊಂಡ ಪೊಲೀಸರು ಪರಿಶೀಲನೆ ನಡೆಸಿದ ವೇಳೆ ವೈಭವ್ ಜೈನ್ ತನ್ನ ಗೆಳತಿಗೆ ಕರೆ ಮಾಡಿರುವುದು ತಿಳಿದುಬಂದಿದೆ. ಆಕೆ ಮಾಡೆಲ್ ಎಂದು ಹೇಳಲಾಗಿದ್ದು, ಇದೀಗ ಪೊಲೀಸರು ಆಕೆಯ ವಿಚಾರಣೆಗೆ ಮುಂದಾಗಿದ್ದಾರೆ ಎನ್ನಲಾಗಿದೆ.