ಹಾಸನ ಜಿಲ್ಲೆಯ ಹೊಳೆ ನರಸೀಪುರ ತಾಲೂಕಿನಲ್ಲಿ ಕೆಲ ಸಾರ್ವಜನಿಕರು ಬಿಯರ್ ಹೊತ್ತೊಯ್ದ ಸ್ವಾರಸ್ಯಕರವಾದ ಘಟನೆಯೊಂದು ನಡೆದಿದೆ. ಬಿಯರ್ ತುಂಬಿಕೊಂಡು ಹೋಗುತ್ತಿದ್ದ ಲಾರಿಯೊಂದು ಪಲ್ಟಿಯಾಗಿ ಬಿದ್ದಿದೆ. ಈ ವೇಳೆ ಸ್ಥಳೀಯರು ಲಾರಿಯಲ್ಲಿದ್ದವರಿಗೆ ಏನಾಗಿದೆ ಅನ್ನೋದನ್ನು ನೋಡೋದು ಬಿಟ್ಟು ಬಿದ್ದಿದ್ದ ಬಾಕ್ಸ್ ಬಾಕ್ಸ್ ಬಿಯರ್ ಅನ್ನು ಹೊತ್ತೊಯ್ದಿದ್ದಾರೆ.
ಹೌದು, ಹಾಸನದ ವುಡ್ ಪಿಕರ್‌ನಿಂದ ಕೇರಳದ ಪೆರಿನ್ ತಾಲಮನ್ನಾಗಿ 900 ಬಾಕ್ಸ್ ಬಿಯರ್ ತುಂಬಿದ್ದ ಲಾರಿ ಸಾಗುತ್ತಿತ್ತು. ಕಡುವಿನ ಕೋಟೆ ಬಳಿ ಕಾಮಗಾರಿ ನಡೆಯುತ್ತಿದ್ದರಿಂದ ಲಾರಿ ಅಲ್ಲಿಗೆ ತಲುಪಿದಾಗ ಸಣ್ಣ ಅಪಘಾತವಾಗಿದೆ. ಲಾರಿ ವಾಲುತ್ತಿದ್ದಂತೆಯೇ ಬಿಯರ್ ಬಾಕ್ಸ್‌ಗಳು ಕೆಳಗೆ ಬಿದ್ದಿವೆ.
ಕೆಳಗೆ ಬಾಕ್ಸ್‌ಗಳು ಬೀಳುತ್ತಿದ್ದಂತೆ ಅಲ್ಲಿದ್ದ ಜನ ಹೊತ್ತೊಯ್ದಿದ್ದಾರೆ. ಇನ್ನು ಈ ಘಟನೆ ಬಗ್ಗೆ ಮಾಹಿತಿ ಬರುತ್ತಿದ್ದಂತೆಯೇ ಪೊಲೀಸರು ಹಾಗೂ ಅಬಕಾರಿ ಅಧಿಕಾರಿಗಳು ಸ್ಥಳಕ್ಕಾಗಮಿಸಿದ್ದಾರೆ. ಅಬಕಾರಿ ನಿರೀಕ್ಷಕ ಶಂಕರಪ್ಪ ಮತ್ತೊಂದು ಲಾರಿಯಲ್ಲಿ ಉಳಿದಿದ್ದ ಬಿಯರ್ ಬಾಕ್ಸ್‌ಗಳನ್ನು ಸೇರಬೇಕಾದ ಸ್ಥಳಕ್ಕೆ ರವಾನಿಸಿದ್ದಾರೆ.