ಕರ್ನಾಟಕ ಲೋಕಸೇವಾ ಆಯೋಗ ನಡೆಸುವ ಗೆಜೆಟೆಡ್ ಪ್ರೊಬೆಷನರಿ (ಗ್ರೂಪ್ ಎ ಮತ್ತು ಬಿ) ಹುದ್ದೆಗಳಿಗೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಮುಖ್ಯ ಪರೀಕ್ಷೆಯ ಒಟ್ಟು ಅಂಕವನ್ನು 1750ರಿಂದ 1250 ಕ್ಕೆ ಇಳಿಸಲಾಗಿದೆ.
ಈ ಹಿಂದೆ 200 ಅಂಕಗಳಿಗೆ ನಡೆಯುತ್ತಿದ್ದ ವ್ಯಕ್ತಿತ್ವ ಪರೀಕ್ಷೆಯನ್ನು ಈಗ 50 ಅಂಕಗಳಿಗೆ ಇಳಿಸಲಾಗಿದ್ದು, ಅಲ್ಲದೆ ಅಭ್ಯರ್ಥಿ ಈ ಪರೀಕ್ಷೆಯಲ್ಲಿ ಗಳಿಸಿದ ಅಂಕ ಶೇಕಡ 80 ದಾಟಿದರೆ ಅಥವಾ ಶೇಕಡ 40 ಕ್ಕಿಂತ ಕಡಿಮೆಯಾದರೆ ಸಂದರ್ಶನ ಮಂಡಳಿ ಸದಸ್ಯರು ಇದಕ್ಕೆ ಕಾರಣವನ್ನು ದಾಖಲಿಸಬೇಕಿದೆ.
ಜೊತೆಗೆ ಈ ಹಿಂದೆ ಎರಡು ಐಚ್ಛಿಕ ವಿಷಯ ಸೇರಿದಂತೆ ಒಟ್ಟು ಏಳು ವಿಷಯಗಳಿಗೆ ಮುಖ್ಯ ಪರೀಕ್ಷೆ ನಡೆಯುತ್ತಿದ್ದು, ಈಗ 250 ಅಂಕಗಳ ಐಚ್ಛಿಕ ವಿಷಯಗಳನ್ನು ಕೈಬಿಡಲಾಗಿದೆ. ಹೀಗಾಗಿ ಮುಖ್ಯ ಪರೀಕ್ಷೆಯಲ್ಲಿ ಒಟ್ಟು 500 ಅಂಕಗಳನ್ನು ಕಡಿತಗೊಳಿಸಿದಂತಾಗಿದೆ.