ಉಡುಪಿ: ಪತ್ರಕರ್ತರ ಸೋಗಿನಲ್ಲಿ ಜನರನ್ನು ವಂಚಿಸಿ, ಬ್ಲಾಕ್ ಮೇಲ್ ಮಾಡುತ್ತಿದ್ದ ನಕಲಿ ಪತ್ರಕರ್ತರ ಗುಂಪನ್ನು ಹಿಡಿದು ಹಿಗ್ಗಾಮುಗ್ಗ ಥಳಿಸಿರುವ ಘಟನೆ ಉಡುಪಿ ಜಿಲ್ಲೆ ಮಲ್ಪೆಯಲ್ಲಿ ನಡೆದಿದೆ.
ಕಳೆದ ಒಂದು ತಿಂಗಳಿಂದ ನಕಲಿ ಪತ್ರಕರ್ತರ ಗ್ಯಾಂಗ್ ಹಣಕ್ಕಾಗಿ ಬೇಡಿಕೆ ಇಟ್ಟು ರೆಸಾರ್ಟ್ ಸಿಬ್ಬಂದಿಗಳಿಗೆ ಬ್ಲಾಕ್ ಮೇಲ್ ಮಾಡುತ್ತಿತ್ತು. ಇದರಿಂದ ಸಾಕಷ್ಟು ತೊಂದರೆ ಅನುಭವಿಸಿದ್ದ ರೆಸಾರ್ಟ್ ಸಿಬ್ಬಂದಿ ಅಂತಿಮವಾಗಿ ಪ್ಲಾನ್ ಒಂದನ್ನು ರೂಪಿಸಿದ್ದಾರೆ.
ನಕಲಿ ಪತ್ರಕರ್ತರಿಗೆ ಅವರು ಇಟ್ಟ ಬೇಡಿಕೆಯಂತೆ ಹಣ ನೀಡುವುದಾಗಿ ಹೇಳಿ ಉಡುಪಿಗೆ ಕರೆಸಿಕೊಂಡಿದ್ದಾರೆ. ಹೀಗೆ ಬಂದ ನಕಲಿ ಪತ್ರಕರ್ತರನ್ನು ಹಿಡಿದು ಅಟ್ಟಾಡಿಸಿ ಹೊಡೆದಿದ್ದಾರೆ. ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.