ಬೆಂಗಳೂರು: ಪತ್ನಿಯೊಬ್ಬಳು ತನ್ನ ಪ್ರಿಯಕರನ ಜೊತೆ ಸೇರಿ ಪತಿಯನ್ನೇ ನಡುರಸ್ತೆಯಲ್ಲಿ ಸುಪಾರಿ ಕೊಟ್ಟು ಬರ್ಬರವಾಗಿ ಹತ್ಯೆ ಮಾಡಿಸಿದ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
ಮೊಹಮ್ಮದ್ ಶಫಿ ಕೊಲೆಯಾದ ದುರ್ದೈವಿ. ರಸ್ತೆಯಲ್ಲಿ ಹೋಗುತ್ತಿದ್ದ ಮೊಹಮ್ಮದ್ ಶಫಿ ಮೇಲೆ ಏಕಾಏಕಿ ದಾಳಿ ನಡೆಸಿದ್ದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದರು. ಮಾರ್ಚ್ 19 ರಂದು ನಡೆದಿದ್ದ ಈ ಘಟನೆ ಸಿಸಿ ಟಿವಿಯಲ್ಲಿ ಸೆರೆಯಾಗಿತ್ತು. ಪ್ರಕರಣದ ಜಾಡು ಹಿಡಿದ ಪೊಲೀಸರು ಇದೀಗ ಮೊಹಮ್ಮದ್ ಶಫಿ ಪತ್ನಿ ತಸ್ಲೀಂ ಸೇರಿ 9 ಜನರನ್ನು ಬಂಧಿಸಿದ್ದಾರೆ.
ಪತ್ನಿಯೊಂದಿಗೆ ಸೆಕ್ಸ್, ಪತಿಗೆ 70 ಸಾವಿರ ರೂ. ಪರಿಹಾರ ನೀಡಲು ಕೋರ್ಟ್ ಆದೇಶ
ಮೊಹಮ್ಮದ್ ಶಫಿ ಪತ್ನಿ ತಸ್ಲೀಂ ಗೆ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದ ಅಪ್ಸರ್ ಖಾನ್ ಪರಿಚಾವಾಗಿದ್ದ. ರಿಯಲ್ ಎಸ್ಟೇಟ್ ನಲ್ಲಿ ಮೊಹಮ್ಮದ್ ಶಫಿ ಮೂಲಕ 75 ಲಕ್ಷ ರೂಪಾಯಿ ಹಣವನ್ನು ಹೂಡಿಸಿದ್ದ. ಈ ಹಣಕ್ಕೆ 5 ಲಕ್ಷ ಕಮಿಷನ್ ಕೊಡೋದಾಗಿ ಶಫಿಗೆ ಭರವಸೆಯನ್ನೂ ನೀಡಿದ್ದ. ಆದರೆ ಯಾವುದೇ ಹಣ ನೀಡಿರಲಿಲ್ಲ. ಕೊಟ್ಟ ಮಾತಿನಂತೆ ಹಣ ನೀಡದಿದ್ದಾಗ ಶಫಿ ಈ ಬಗ್ಗೆ ವಿಚಾರಿಸಿದ್ದಾನೆ. ಇದೇ ಸಮಯವೆಂದು ತಸ್ಲೀಂ ಹಾಗೂ ಅಪ್ಸರ್ ಖಾನ್ ಇಬ್ಬರೂ ಶಫಿಯನ್ನು ಮುಗಿಸಲು ಪ್ಲಾನ್ ಮಾಡಿದ್ದಾರೆ.
ಅದರಂತೆ ಪ್ರಿಯಕರನ ಮೂಲಕ ತಸ್ಲೀಂ ಪತಿಯನ್ನು ಹತ್ಯೆ ಮಾಡಲು ಸುಪಾರಿ ನೀಡಿದ್ದಾಳೆ. ಹಣ ಕೊಡುವುದಾಗಿ ಹೇಳಿ ಗುರಪ್ಪನ ಪಾಳ್ಯದ ಬಳಿ ಶಫಿಯನ್ನು ಕರೆಸಿದ್ದಾರೆ. ಆತ ಬರುತ್ತಿದ್ದಂತೆಯೇ ನಡು ರಸ್ತೆಯಲ್ಲಿ ಆತನ ಮೇಲೆ ದಾಳಿ ನಡೆಸಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.