ಕೊರೊನಾ ಇರೋದ್ರಿಂದ ಈ ವರ್ಷ ಎಂಜಿ ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ ಸೆಲಿಬ್ರೇಷನ್‌ಗೆ ಬ್ರೇಕ್ ಹಾಕಲಾಗಿದೆ. ಹೇಗಿದ್ರೂ ಅಲ್ಲಿ ಸಂಭ್ರಮಾಚರಣೆ ಇರೋದಿಲ್ಲ. ನಮ್ಮ ನಮ್ಮ ಅಪಾರ್ಟ್ಮೆಂಟ್‌ಗಳ ಪ್ಲಾಟ್‌ಗಳ ಮುಂದೆ ದೊಡ್ಡದಾಗಿ ಆಚರಣೆ ಮಾಡಬೇಕು ಅಂತಾ ಏನಾದ್ರೂ ಪ್ಲಾನ್ ಮಾಡಿದ್ರೆ ಅದನ್ನ ಇವತ್ತೇ ಕ್ಯಾನ್ಸಲ್ ಮಾಡ್ಕೊಳ್ಳಿ. ಯಾಕೆ ಅಂದರೆ ಅಪಾರ್ಟ್ಮೆಂಟ್ ಹೊರಗಡೆಯೂ ನ್ಯೂ ಇಯರ್ ಸೆಲಿಬ್ರೇಷನ್ ಮಾಡುವಂತಿಲ್ಲ.
ಹೌದು, ಕೊರೊನಾ ಎರಡನೇ ಅಲೆಯ ಭೀತಿ ಎದುರಾಗಿರೋ ಬೆನ್ನಲ್ಲೇ ಹೊಸ ವರ್ಷದ ಸಂಭ್ರಮಾಚರಣೆಗೆ ಬ್ರೇಕ್ ಬಿದ್ದಿದೆ. ಈಗಾಗಲೇ ಎಂಜಿ ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ ಸಂಭ್ರಮಾಚರಣೆ ಮಾಡುವಂತಿಲ್ಲ ಅಂತಾ ಸರ್ಕಾರ ಆದೇಶ ಮಾಡಿದೆ. ಇದರ ಬೆನ್ನಲ್ಲೇ ಇದೀಗ ಅಪಾರ್ಟ್ಮೆಂಟ್ ಹೊರಗಡೆ, ಅಥವಾ ಫ್ಲಾಟ್‌ಗಳ ಮುಂದೆ ವೇದಿಕೆ ಹಾಕಿ ಸಂಭ್ರಮಾಚರಣೆ ಮಾಡುವಂತಿಲ್ಲ ಎಂದು ಪಾಲಿಕೆ ಆಯುಕ್ತ ಮಂಜುನಾಥ್ ಪ್ರಸಾದ್ ಹೇಳಿದ್ದಾರೆ.
ಅಪಾರ್ಟ್ಮೆಂಟ್ ಹೊರಗಡೆ, ವೇದಿಕೆಗಳಲ್ಲಿ ಹೊಸ ವರ್ಷ ಆಚರಣೆ ಮಾಡುವಂತಿಲ್ಲ. ಅಪಾರ್ಟ್ಮೆಂಟ್ ನಿವಾಸಿಗಳು ತಮ್ಮ ತಮ್ಮ ಫ್ಲಾಟ್‌ಗಳ ಒಳಗೆ ಬೇಕಾದರೆ ಆಚರಿಸಿಬಹುದು. ಸಾರ್ವಜನಿಕ ಸ್ಥಳಗಳಲ್ಲಿ ಆಚರಣೆ ನಿಷೇಧ ಇದೆ ಹೆಚ್ಚು ಜನ ಒಂದೆ ಕಡೆ ಸೇರೋದನ್ನ ನಿಷೇಧಿಸಲಾಗಿದೆ. ಹೋಟೆಲ್, ರೆಸ್ಟೋರೆಂಟ್‌ಗಳಲ್ಲಿ ಎಸ್‌ಓಪಿ ಅನುಸಾರ ಮಾತ್ರ ಆಚರಣೆಗೆ ಅವಕಾಶ ನೀಡಲಾಗಿದೆ.
ಹೊಸ ವರ್ಷದ ಸೆಲಿಬ್ರೇಷನ್ ನಿಷೇಧ ಅಪಾರ್ಟ್ಮೆಂಟ್‌ಗಳಿಗೂ ಅನ್ವಯವಾಗುತ್ತದೆ. ಅಲ್ಲಿಯೂ ಹೆಚ್ಚು ಜನ ಸೇರುವುದು, ಕಾರ್ಯಕ್ರಮಗಳನ್ನು ಮಾಡುವುದು ನಿಷೇಧ ಮಾಡಲಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ 400 ಕ್ಕೂ ಹೆಚ್ಚು ಜನ ಮಾರ್ಷಲ್‌ಗಳು, ಪೊಲೀಸರು ರಾತ್ರಿ ಗಸ್ತು ಇರುತ್ತಾರೆ. ರೆಸಿಡೆನ್ಸ್ ವೆಲ್‌ಫೇರ್‌ಗಳಿಗೆ ಈ ಬಗ್ಗೆ ಸೂಚನೆ ನೀಡಲಾಗಿದ್ದು ಅಸೋಸಿಯೇಷನ್‌ಗಳು ಈ ಬಗ್ಗೆ ಗಮನ ಹರಿಸಬೇಕು. ಅಕಸ್ಮಾತ್ ಹೆಚ್ಚು ಜನ ಸೇರಿ ಆಚರಣೆ ಮಾಡಿದ್ದಲ್ಲಿ ಅಂತವರ ಮೇಲೆ ಕ್ರಮ ಜರುಗಿಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.