ಬೆಂಗಳೂರು: ಅನ್ಯಾಯವಾದಾಗ ನ್ಯಾಯ ಕೇಳೋದೇ ತಪ್ಪಾ? ಒಂದು ವಾರ ಯಾಕೆ ಮತ್ತೊಂದು ವಾರ ಅಮಾನತು ಮಾಡಿದರೂ ನಾನು ಹೆದರಲ್ಲ. ಸರ್ಕಾರದ ನಡೆಗೆ ಬೇಜಾರಾಗಿ ಶರ್ಟ್ ಬಿಚ್ಚಿ ಆಕ್ರೋಶ ವ್ಯಕ್ತಪಡಿಸಿದೆ ಹೊರತು ನಾನು ಅಶ್ಲೀಲವಾಗಿ ನಡೆದುಕೊಂಡಿಲ್ಲ ಎಂದು ಕಾಂಗ್ರೆಸ್ ಶಾಸಕ ಸಂಗಮೇಶ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದನದಲ್ಲಿ ಶರ್ಟ್ ಬಿಚ್ಚಿ ಪ್ರತಿಭಟನೆ ನಡೆಸಿದ ವಿಚಾರವಾಗಿ, ನಾನು ನ್ಯಾಯ ಕೇಳಿದ್ದಕ್ಕೆ ಅಮಾನತು ಮಾಡಿದ್ದಾರೆ. ಸದ್ಯದ ಪ್ರಜಾಪ್ರಭುತ್ವ ಹೇಗಿದೆ ಎಂಬುದಕ್ಕೆ ಇದೇ ಸಾಕ್ಷಿ. ರಾಜ್ಯ ಸರ್ಕಾರ ಗೂಂಡಾಗಿರಿ ಮಾಡುತ್ತಿದೆ. ಮಾನಸಿಕವಾಗಿ ನನ್ನ ಕುಗ್ಗಿಸಬೇಕು ಎಂದು ಈ ರೀತಿ ಮಾಡಲಾಗಿದೆ. ಇದಕ್ಕೆಲ್ಲ ನಾನು ಹೆದರುವುದಿಲ್ಲ ಎಂದು ಕಿಡಿಕಾರಿದ್ದಾರೆ.
ಕಲಾಪದಲ್ಲಿ ಶರ್ಟ್ ಬಿಚ್ಚಿದ ಪ್ರಕರಣ – 1 ವಾರ ಕಾಲ ‘ಕೈ’ ಶಾಸಕ ಅಮಾನತು
ನಾನು ಕ್ಷಮೆ ಕೇಳುವ ಪ್ರಶ್ನೆಯಿಲ್ಲ. ನಾನು ಕೆಟ್ಟ ಕೆಲಸ ಮಾಡಿಲ್ಲ. ನನ್ನ ಕ್ಷೇತ್ರದ ಮತದಾರರು ನಾನು ಮಾಡಿದ್ದು ತಪ್ಪು ಎಂದರೆ ಒಪ್ಪಿಕೊಳ್ಳುತ್ತೇನೆ. ಸ್ಪೀಕರ್ ಅಮಾನತಿಗೂ ಕೇರ್ ಮಾಡಲ್ಲ ಎಂದು ಹೇಳಿದ್ದಾರೆ.