ಕೋವಿಡ್ ಕಾರಣದಿಂದ ನೇಕಾರರು ಕೂಡ ಸಾಕಷ್ಟು ಆರ್ಥಿಕ ಸಂಕಷ್ಟ ಎದುರಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ನಟ ದುನಿಯಾ ವಿಜಯ್, ನೇಕಾರರು ತಯಾರು ಮಾಡಿದ ಬಟ್ಟೆ ಕೊಳ್ಳುವ ಮೂಲಕ ನೇಕಾರರ ಬದುಕಿಗೆ ಹೆಗಲಾಗಿ ನಿಲ್ಲಿ ಎಂದು ಕೋರಿಕೊಂಡಿದ್ದಾರೆ.
ನಾವು ಮಾತಾಡೋ ಭಾಷೆ ಕನ್ನಡ, ಕುಡಿಯೋ ನೀರು ಕಾವೇರಿ, ನಿಂತಿರೋ ನೆಲ ಕರ್ನಾಟಕವಾಗಿರೋವಾಗ ನಾವು ಹಾಕೋ ಬಟ್ಟೆ ಕೂಡ ಕನ್ನಡವಾಗಿರಬೇಕು. ಇದು ನಮ್ಮ ಜನ ನಮ್ಮ ನೆಲದಲ್ಲಿ ಬೆಳೆದ ಹತ್ತಿಯಿಂದ ಚರಕದಲ್ಲಿ ನೂಲು ತೆಗೆದು ಕೈಮಗ್ಗದಲ್ಲಿ ನೈಯ್ದ ಬಟ್ಟೆ ನಮ್ಮ ಜನರ ಬೆವರಿನ ಫಲ. ಕೊರೋನಾ ಪಿಡುಗು ಶುರುವಾದಾಗಿನಿಂದ ದೇಸಿ ಸಂಸ್ಥೆಯ ನೇಕಾರರು ತಯಾರಿಸುವ ಬಟ್ಟೆ ಸುಮಾರಿದೆ. ಹನಿಹನಿಗೂಡಿದರೆ ಹಳ್ಳ ಅನ್ನೋಹಾಗೆ ನೀವೆಲ್ಲರೂ ಒಂದೊಂದು ಬಟ್ಟೆ ಖರೀದಿಸಿದರೂ ನಮ್ಮ ನೇಕಾರರ ಬೆವರಿನ ದುಡಿಮೆಗೆ ಹೆಗಲಾಗಿ ನಿಂತಂತೆ. ಬನ್ನಿ ಸೌತ್ ಎಂಡ್ ಸರ್ಕಲ್, ಸೀತಾ ಸರ್ಕಲ್, ಕೆಂಗೇರಿ ಮತ್ತು ಮಲ್ಲೇಶ್ವರಂನ ‘ದೇಸಿ’ ಅಂಗಡಿಗಳಲ್ಲಿ ಕೈಮಗ್ಗದ ಬಟ್ಟೆಗಳನ್ನು ಕೊಳ್ಳೋಣ. ನಮ್ಮತನವನ್ನು ಉಳಿಸಿಕೊಳ್ಳೋಣ ಎಂದು ಬರೆದುಕೊಂಡಿದ್ದಾರೆ.
https://www.instagram.com/p/CGkIceTg2fq/?utm_source=ig_web_copy_link