alex Certify ನಿಮ್ಮ ಬಳಿ ಸ್ಮಾರ್ಟ್ ಫೋನ್ ಇಲ್ಲ ಅಂದರೆ ಮೆಟ್ರೋ ಬಳಕೆ ಅಸಾಧ್ಯ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮ ಬಳಿ ಸ್ಮಾರ್ಟ್ ಫೋನ್ ಇಲ್ಲ ಅಂದರೆ ಮೆಟ್ರೋ ಬಳಕೆ ಅಸಾಧ್ಯ…!

ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಮೆಟ್ರೋ ಸೇವೆ ಆರಂಭವಾಗಿದೆ. ಒಂದಿಷ್ಟು ಷರತ್ತುಗಳ ಅನ್ವಯ ಮೆಟ್ರೋ ಪ್ರಯಾಣಿಕರಿಗೆ ಪ್ರಯಾಣ ಮಾಡುವ ಅವಕಾಶ ಕಲ್ಪಿಸಲಾಗಿದೆ. ಹೇಗೋ ಮೆಟ್ರೋ ಸೇವೆ ಪ್ರಾರಂಭವಾಯ್ತು ಅನ್ನೋ ಖುಷಿಯಲ್ಲಿದ್ದ ಮೆಟ್ರೋ ಪ್ರಯಾಣಿಕರಿಗೆ ಇದೀಗ ಸಮಸ್ಯೆಯೊಂದು ಪ್ರಾರಂಭವಾಗಿದೆ.

ಹೌದು, ಮೆಟ್ರೋಗೆ ಬರುವ ಪ್ರಯಾಣಿಕರಲ್ಲಿ ಎಷ್ಟೋ ಮಂದಿಗೆ ಸ್ಮಾರ್ಟ್ ಫೋನ್ ಬಳಕೆ ಗೊತ್ತಿಲ್ಲ. ಇಂತವರು ಮೆಟ್ರೋ ಪ್ರಯಾಣದಿಂದ ದೂರ ಉಳಿಯಬೇಕಾಗಿದೆ. ಸೋಂಕು ಹರಡುತ್ತದೆ ಎಂಬ ಕಾರಣಕ್ಕೆ ಟೋಕನ್ ವ್ಯವಸ್ಥೆ ಇಲ್ಲ. ಸ್ಮಾರ್ಟ್‌ಕಾರ್ಡ್ ಇದ್ದರೆ ಮಾತ್ರ ಪ್ರಯಾಣಕ್ಕೆ ಅವಕಾಶ ಎಂದು ಹೇಳಲಾಗಿದೆ.

ಅಷ್ಟೆ ಅಲ್ಲ ಎಷ್ಟೋ ಜನ ರೀಚಾರ್ಜ್ ಮಾಡುವುದಕ್ಕೆ ಮೊಬೈಲ್ ಆಪ್ ಅಥವಾ ಸ್ಟೇಷನ್‌ನಲ್ಲಿ ಯುಪಿಐ ಪೇಮೆಂಟ್ ಮಾಡಬೇಕು. ಈ ಡಿಜಿಟಲ್ ವಿಧಾನ ಅನೇಕ ಜನರಿಗೆ ಗೊತ್ತಿಲ್ಲ. ಹೀಗಾಗಿ ಮೆಟ್ರೋದಲ್ಲಿ ಪ್ರಯಾಣಿಸಬೇಕು ಎಂದುಕೊಂಡವರು ವಾಪಸ್ ಆಗುತ್ತಿದ್ದಾರೆ.

ಇನ್ನು ನೆಟ್‌ವರ್ಕ್, ತಾಂತ್ರಿಕ ಕಾರಣದಿಂದ ಗೂಗಲ್ ಪೇ, ಪೋನ್ ಪೇ, ಪೇಟಿಎಂ ಸೇರಿದಂತೆ ಆನ್‌ಲೈನ್ ಟ್ರಾನ್ಸಾಕ್ಷನ್ ಕೂಡ ಕಷ್ಟವಾಗುತ್ತಿರೋದ್ರಿಂದ ಅನೇಕರು ಮೆಟ್ರೋ ನಿಲ್ದಾಣಕ್ಕೆ ಬಂದು ವಾಪಸ್ಸಾಗುತ್ತಿದ್ದಾರೆ. ಒಟ್ನಲ್ಲಿ ಮೆಟ್ರೋ ಸೇವೆ ಆರಂಭವಾದರೂ ಅದರ ಉಪಯೋಗ ಎಲ್ಲರಿಗೂ ಸಿಗುತ್ತಿಲ್ಲ ಅನ್ನೋದು ಬೇಸರದ ಸಂಗತಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...