ಮಾಜಿ ಸಚಿವ ಸತೀಶ್ ಜಾರಕಿಹೊಳಿ ಮೂಢನಂಬಿಕೆಗಳ ವಿರೋಧಿ. ಹೀಗಾಗಿ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಯಮಕನಮರಡಿ ಕ್ಷೇತ್ರದಿಂದ ರಾಹುಕಾಲದಲ್ಲಿ ನಾಮಪತ್ರ ಸಲ್ಲಿಸಿ ಜಯ ಸಾಧಿಸಿದ್ದರು. ಅಲ್ಲದೆ ಮೂಢನಂಬಿಕೆಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಹಲವು ಕಾರ್ಯಕ್ರಮಗಳನ್ನು ಸತೀಶ್ ಜಾರಕಿಹೊಳಿ ಹಮ್ಮಿಕೊಳ್ಳುತ್ತಿರುತ್ತಾರೆ.
ಇದೀಗ ಸತೀಶ್ ಜಾರಕಿಹೊಳಿ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದಾರೆ. ಸತೀಶ್ ಜಾರಕಿಹೊಳಿ ಇಂದು ತಮ್ಮ ನಾಮಪತ್ರ ಸಲ್ಲಿಕೆ ಮಾಡುತ್ತಿದ್ದು, ಇದಕ್ಕಾಗಿ ‘ಕರಿ’ ದಿನವನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಸಿಡಿ ಕೇಸ್: ಪೊಲೀಸರು ತಮ್ಮ ಘನತೆಗೆ ತಕ್ಕಂತೆ ಗೌರವಯುತವಾಗಿ ಕೆಲಸ ಮಾಡಲಿ ಎಂದ ಡಿ.ಕೆ. ಶಿವಕುಮಾರ್
ಹೋಳಿ ಹುಣ್ಣಿಮೆಯ ಮರುದಿನವನ್ನು ‘ಕರಿ’ ಎಂದು ಗುರುತಿಸಲಾಗುತ್ತಿದ್ದು, ಅಂದು ಯಾವುದೇ ಶುಭ ಕಾರ್ಯ ಮಾಡಲು ಬಹಳಷ್ಟು ಮಂದಿ ಬಯಸುವುದಿಲ್ಲ. ಆದರೆ ಸತೀಶ್ ಜಾರಕಿಹೊಳಿ ತಮ್ಮ ನಾಮಪತ್ರ ಸಲ್ಲಿಕೆಗೆ ಅದೇ ದಿನವನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಸತೀಶ್ ಜಾರಕಿಹೊಳಿ ಕರಿದಿನ, ರಾಹುಕಾಲ ಇವುಗಳಲ್ಲೆಲ್ಲಾ ನನಗೆ ನಂಬಿಕೆ ಇಲ್ಲ.ಒಳ್ಳೆಯ ಕೆಲಸ ಮಾಡಿದರೆ ಒಳ್ಳೆಯ ಕಾಲ ಕೆಟ್ಟ ಕೆಲಸ ಮಾಡಿದರೆ ಕೆಟ್ಟಕಾಲ ಎಂದು ಮಾರ್ಮಿಕವಾಗಿ ತಿಳಿಸಿದ್ದಾರೆ.