ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ಬಂಧನಕ್ಕೀಡಾಗಿರುವ ಡಾನ್ಸರ್ ಕಿಶೋರ್ ಶೆಟ್ಟಿ ಸಿಸಿಬಿ ವಿಚಾರಣೆ ವೇಳೆ ಹಲವು ಸ್ಫೋಟಕ ಮಾಹಿತಿ ಬಾಯ್ಬಿಟ್ಟಿದ್ದಾನೆ.
ವಿಚಾರಣೆ ವೇಳೆ ತಾನು ಡ್ರಗ್ಸ್ ಸೇವೆನೆ ಮಾಡುತ್ತಿದ್ದುದಾಗಿ ಒಪ್ಪಿಕೊಂಡಿರುವ ಕಿಶೋರ್, ತಾನು ಎಂಡಿಎಂ ಮಾತ್ರೆ ಸೇವಿಸುತ್ತಿರಲಿಲ್ಲ. ಬದಲಾಗಿ ಕೊಕೇನ್ ಸೇವನೆ ಮಾಡುತ್ತಿದ್ದೆ ಎಂದು ಹೇಳಿದ್ದಾನೆ. ಎರಡು ಗೆರೆ ಪ್ರಮಾಣದಷ್ಟು ಕೊಕೇನ್ ಸೇವಿಸುತ್ತಿರುವುದಾಗಿ ಹೇಳಿದ್ದಾನೆ.
ಮಂಗಳೂರಿನಲ್ಲಿ ಭರ್ಜರಿ ನಶೆ ಪಾರ್ಟಿ ಆಯೋಜನೆ ಮಾಡಲು ಉದ್ದೇಶಿಸಲಾಗಿತ್ತು. ಅದರಲ್ಲಿ 15 ಜನ ಯುವತಿಯರು ಪಾಲ್ಗೊಳ್ಳುವವರಿದ್ದರು. ಆದರೆ ಆ ಪಾರ್ಟಿ ಕ್ಯಾನ್ಸಲ್ ಆಗಿತ್ತು ಎಂದಿದ್ದಾನೆ. ಇನ್ನು ತಾನು ಎಂಡಿಎಂ ಮಾತ್ರೆ ಸೇರಿದಂತೆ ವಿವಿಧ ಡ್ರಗ್ಸ್ ಗಳನ್ನು ಬೇರೆಯವರಿಗಾಗಿ ಬೆಂಗಳೂರಿನಿಂದ ಮಂಗಳೂರಿಗೆ ತರಿಸಿ ಮಾರಾಟ ಮಾಡುತ್ತಿದ್ದೆ. ನನ್ನ ಆಪ್ತ ಸ್ನೇಹಿತನಿಂದಲೇ ಡ್ರಗ್ಸ್ ವ್ಯವಹಾರದ ನಂಟು ಆರಂಭವಾಗಿದ್ದಾಗಿ ಸಿಸಿಬಿ ತನಿಖೆ ವೇಳೆ ಬಾಯ್ಬಿಟ್ಟಿದ್ದಾನೆ.