
ರಾಯಚೂರು: ಹುಟ್ಟಿದ ಒಂದು ದಿನದ ನವಜಾತ ಶಿಶುವನ್ನು ಜಮೀನಿನಲ್ಲಿ ಬಿಸಾಕಿ ಹೋಗಿರುವ ಘಟನೆ ರಾಯಚೂರಿನಲ್ಲಿ ಬೆಳಕಿಗೆ ಬಂದಿದೆ.
ಲಿಂಗಸಗೂರು ತಾಲೂಕಿನ ಬೆಂಡೋಣಿ ಗ್ರಾಮದ ಜಮೀನಿನಲ್ಲಿ ಶಿಶು ಪತ್ತೆಯಾಗಿದ್ದು, ನವಜಾತ ಹೆಣ್ಣು ಮಗು ಇದಾಗಿದ್ದು, ಹುಟ್ಟಿದ ಒಂದು ದಿನಕ್ಕೆ ಮಗುವನ್ನು ಬಿಸಾಕಿ ಹೋಗಿದ್ದಾರೆ.
ಕುಮಾರಗೌಡ ಎಂಬುವವರ ಜಮೀನಿನಲ್ಲಿ ಈ ಶಿಶು ಪತ್ತೆಯಾಗಿದೆ. ಬಹಿರ್ದೆಸೆಗೆ ತೆರಳಿದ ಮಲ್ಲಿಕಾರ್ಜುನ ಹಾಗೂ ಕಿರಣ್ ಎಂಬುವರಿಗೆ ಮಗುವಿನ ಅಳುವಿನ ಶಬ್ಧ ಕೇಳಿದ್ದು, ಗಮನಿಸಿದಾಗ ಜಮೀನಿನಲ್ಲಿ ಶಿಶು ಪತ್ತೆಯಾಗಿದೆ.
ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಮಕ್ಕಳ ಕಲ್ಯಾಣ ಸಮಿತಿ ಹಾಗೂ ಶಿಶು ಅಭಿವೃದ್ಧಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಶಿಶುವನ್ನು ಲಿಂಗಸುಗೂರು ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ.