ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಜಾಲದ ನಂಟು ಕೇಸ್ ಗೆ ಸಂಬಂಧಿಸಿದಂತೆ ನನಗೂ ಡ್ರಗ್ಸ್ ಗೂ ಯಾವುದೇ ಲಿಂಕ್ ಇಲ್ಲ. ನಾನು ಯಾವುದೇ ತಪ್ಪು ಮಾಡಿಲ್ಲ. ನನಗೂ ನಟಿ ರಾಗಿಣಿಗೂ ಯಾವುದೇ ಸಂಬಂಧವಿಲ್ಲ. ಐಎಸ್ ಡಿ ಅಧಿಕಾರಿಗಳು ಕೇಳಿದ ಎಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡಿದ್ದೇನೆ ಎಂದು ನಟ ಲೂಸ್ ಮಾದ ಯೋಗೀಶ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಐಎಸ್ ಡಿ ನನಗೆ ಕರೆ ಮಾಡಿದಾಗ ನನಗೆ ಶಾಕ್ ಆಗಿದ್ದು ನಿಜ. ನನಗೂ ಡ್ರಗ್ಸ್ ಪ್ರಕರಣಕ್ಕೂ ಯಾವುದೇ ನಂಟಿಲ್ಲ. ಶನಿವಾರವೇ ವಿಚಾರಣೆಗೆ ಹಾಜರಾಗಿ ಬಂದಿದ್ದೇನೆ. ಅಧಿಕಾರಿಗಳು ಕೇಳಿದ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿದ್ದೇನೆ. ಅವರು ಜನರಲ್ಲಾಗಿ ಪ್ರಶ್ನೆ ಮಾಡಿದ್ದಾರೆ. ನಾನು ಉತ್ತರಿಸಿದ್ದೇನೆ ಎಂದರು.
ನನಗೂ ಡ್ರಗ್ಸ್ ಪ್ರಕರಣಕ್ಕೂ ಸಂಬಂಧವಿಲ್ಲ. ಇತ್ತೀಚೆಗೆ ಯಾವುದೇ ಪಾರ್ಟಿಗಳಿಗೂ ನಾನು ಹೋಗಿಲ್ಲ. 2011-12ರಲ್ಲೇ ಕೊನೆ ಅದಾದ ಬಳಿಕ ನಾನು ಯಾವ ಪಾರ್ಟಿಯನ್ನೂ ಅಟೆಂಡ್ ಮಾಡಿಲ್ಲ. ನನಗೆ ಕುಡಿಯುವ, ಸಿಗರೇಟ್ ಸೇದುವ ಹಾಗೂ ಗುಟ್ಕಾ ಚಟವಿದೆ ಬಿಟ್ಟರೆ ಬೇರೆ ಯಾವುದೇ ಅಭ್ಯಾಸವಿಲ್ಲ. ಶ್ರೀಲಂಕಾಗೆ ನಾನು ಹೋಗಿದ್ದು ನಿಜ. ರಾಜ್ ಕಪ್ ಟೂರ್ನಿಗೆ ನಾನು ಲಂಕಾಗೆ ಹೋಗಿ ಬಂದಿದ್ದೆ ಅಷ್ಟೇ ಎಂದು ಹೇಳಿದ್ದಾರೆ.
ಇನ್ನು ನನಗೂ ರಗಿಣಿ ದ್ವಿವೇದಿಗೂ ಯಾವುದೇ ಸಂಬಂಧವಿಲ್ಲ. 2013ರಲ್ಲಿ ನಾವಿಬ್ಬರು ಒಂದು ಸಿನಿಮಾ ಮೆಡಿದ್ದೆವು. ಅದು ಬಿಡುಗಡೆಯಾಯಿತು ಅಷ್ಟೇ. ಅದಾದ ಬಳಿಕ ನನಗೂ ರಾಗಿಣಿಗೂ ಯಾವುದೇ ಫೋನ್ ಕಾಲ್ ಆಗಲಿ, ಮೆಸೇಜ್ ಸಂಪರ್ಕವಾಗಲಿ ಇಲ್ಲ. ಐಎಸ್ ಡಿ ವಿಚಾರಣೆ ವೇಳೆ ಕೂಡ ರಾಗಿಣಿ ಬಗ್ಗೆ ಒಂದೇ ಒಂದು ಪ್ರಶ್ನೆ ಕೂಡ ಕೇಳಿಲ್ಲ. ಆಕೆಯ ಬಗ್ಗೆ ಯಾವುದೇ ಪ್ರಸ್ತಾಪ ಮಾಡಿಲ್ಲ. ಮಾಧ್ಯಮಗಳಲ್ಲಿ ನಮ್ಮ ಬಗ್ಗೆ ತಪ್ಪು ತೋರಿಸಲಾಗುತ್ತಿದೆ. ನನಗೂ ಫ್ಯಾಮಿಲಿಯಿದೆ. ಒಂದೂವರೆ ವರ್ಷದ ಮಗುವಿದೆ. ನನ್ನ ಫ್ಯಾಮಿಲಿಗೆ ಡಿಸ್ಟರ್ಬ್ ಆಗುಬಾರದು. ದಯವಿಟ್ಟು ತಪ್ಪು ಅರ್ಥ ಬರುವಂತೆ ಸುದ್ದಿ ಪ್ರಸಾರ ಮಾಡಬೇಡಿ. 2013ರ ಸಿನಿಮಾ ಬಳಿಕ ನನಗೂ ರಾಗಿಣಿಗೂ ಯಾವುದೇ ಸಂಪರ್ಕವಿಲ್ಲ ಎಂದು ಸ್ಪಷ್ಟಪಡಿಸಿದರು.