alex Certify ನಟ‌ ಅನಿರುದ್ದ್ ಮನೆಗೆ ಭೇಟಿ ಕೊಟ್ಟ ಶಾಸಕಿ ಸೌಮ್ಯ ರೆಡ್ಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಟ‌ ಅನಿರುದ್ದ್ ಮನೆಗೆ ಭೇಟಿ ಕೊಟ್ಟ ಶಾಸಕಿ ಸೌಮ್ಯ ರೆಡ್ಡಿ

ಜಯನಗರದ ಶಾಸಕಿ ಸೌಮ್ಯ ರೆಡ್ಡಿ ‘ಜೊತೆ ಜೊತೆಯಲಿ’ ಧಾರವಾಹಿ ಖ್ಯಾತಿಯ ಅನಿರುದ್ದ್ ಮನೆಗೆ ಭೇಟಿ ನೀಡಿದ್ದಾರೆ. ಇದನ್ನು ಅನಿರುದ್ದ್ ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡುವ ಮೂಲಕ ಕೆಲ ಸಾಲುಗಳನ್ನು ಬರೆದುಕೊಂಡಿದ್ದಾರೆ.

ಸನ್ಮಾನ್ಯ ಶಾಸಕರಾದ ಶ್ರೀಮತಿ ಸೌಮ್ಯರೆಡ್ಡಿರವರು ಇಂದು ನಮ್ಮ ಮನೆಗೆ ಬಂದಿದ್ದು ಬಹಳ ಸಂತೋಷ ಆಯ್ತು…..ನನಗೆ ನನ್ನ ಕೆಲವು ಪರಿಕಲ್ಪನೆಗಳನ್ನ ಅವರ ಜೊತೆ ಹಂಚಿಕೊಳ್ಳೋದಕ್ಕೆ ಅವಕಾಶ ಸಿಕ್ಕಿತ್ತು.’ಆರ್ಯವರ್ಧನ್ ಯೋಜನೆ’‌ ಕಾಲುವೆಯ ಮೇಲೆ ಸೌರ ಫಲಕಗಳನ್ನ ಹಾಕುವುದು. ಕಾಲುವೆಯ ಎರಡೂ ಬದಿಯಲ್ಲಿ ಸಸಿಗಳನ್ನು ನೆಡೋದು. ಗ್ರಿಲ್ ಗಳನ್ನ ಹಾಕಿ ಅದನ್ನು ನಿರ್ವಹಿಸುವುದು ಇತ್ಯಾದಿ…..ಅವರು ಅವುಗಳಿಗೆ ಸಕರಾತ್ಮಕವಾಗಿ ಪ್ರತಿಕ್ರಿಯಿಸಿ ಬೆಂಬಲ ನೀಡಿದರು…..ಸಮಾಜದ ಪರ ಅವರ ಕಾಳಜಿ ಮತ್ತು ಸಮಾಜಕ್ಕೋಸ್ಕರ ಏನಾದರೂ ಗಣನೀಯ ಕೆಲಸ ಮಾಡಬೇಕೆನ್ನುವ ಹಂಬಲ ನಿಜಕ್ಕೂ ಶ್ಲಾಘನೀಯ…ಎಂದು ಬರೆದುಕೊಂಡಿದ್ದಾರೆ.

https://www.instagram.com/p/CJv-l5THxou/?utm_source=ig_web_copy_link

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...