ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಸಿಸಿಬಿ ವಶದಲ್ಲಿರುವ ನಟಿ ರಾಗಿಣಿ, ಸಂಜನಾ ಮೊಬೈಲ್ ನಲ್ಲಿ ಸ್ಫೋಟಕ ಮಾಹಿತಿ ಸಿಸಿಬಿ ಅಧಿಕಾರಿಗಳಿಗೆ ಲಭ್ಯವಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಮೂರು ದಿನಗಳ ಕಾಲ ಸಿಸಿಬಿ ಕಸ್ಟಡಿಗೆ ಪಡೆಯಲು ನಟಿಯರಿಬ್ಬರು ಹಾಗೂ ಉಳಿದ ಆರೋಪಿಗಳಾದ ರಾಹುಲ್, ಲೂಮ್ ಪೆಪ್ಪರ್, ಪ್ರಶಾಂತ್ ರಂಕ ಸೇರಿದಂತೆ ಹಲವರ ಜತೆ ನಡೆಸಿದ್ದ ಚಾಟಿಂಗ್ ಕಾರಣ ಎನ್ನಲಾಗಿದೆ.
ಆರೋಪಿಗಳು ಮೊಬೈಲ್ ನಲ್ಲಿ ಕಳೆದ ಒಂದು ವರ್ಷದಿಂದ ನಡೆಸಿದ್ದ ಚಾಟಿಂಗ್ ಬಗ್ಗೆ ಸಿಸಿಬಿ ಅಧಿಕಾರಿಗಳು ಮಾಹಿತಿ ಕಲೆ ಹಾಕಿದ್ದಾರೆ. ರಾಗಿಣಿ ಸೇರಿ ಹಲವರು ಡ್ರಗ್ಸ್ ದಂಧೆಯಲ್ಲಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಈಗ ಬಂಧನಕ್ಕೊಳಗಾಗಿರುವ 6 ಆರೋಪಿಗಳು ಹಲವರ ಜತೆ ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿರುವ ಬಗ್ಗೆ ಹಾಗೂ ಡ್ರಗ್ಸ್ ಖರೀದಿ ಮಾಡಿರುವ ಬಗ್ಗೆ ಸಂಪೂರ್ಣ ಮಾಹಿತಿ ಮೊಬೈಲ್ ನಿಂದ ಲಭ್ಯವಾಗಿದೆ. ಇದೇ ಕಾರಣಕ್ಕೆ ಇನ್ನಷ್ಟು ತನಿಖೆ ನಡೆಸುವ ನಿಟ್ಟಿನಲ್ಲಿ ನಟಿ ರಾಗಿಣಿ, ಸಂಜನಾ ಹಾಗೂ ಉಳಿದ ಆರೋಪಿಗಳನ್ನು ಮತ್ತೆ ಮೂರು ದಿನಗಳ ಕಾಲ ಸಿಸಿಬಿ ಕಸ್ಟಡಿಗೆ ಪಡೆದಿದೆ ಎನ್ನಲಾಗಿದೆ.