
ಬೆಂಗಳೂರು: ನಟಿ ರಾಗಿಣಿ ಯಾರಂತ ನನಗೆ ಗೊತ್ತಿಲ್ಲ. ಚಿತ್ರರಂಗಕ್ಕೂ ನನಗೂ ಸಂಪರ್ಕ ಕಡಿಮೆ ಎಂದು ಪೌರಾಡಳಿತ, ತೋಟಗಾರಿಕೆ ಮತ್ತು ರೇಷ್ಮೆ ಸಚಿವ ನಾರಾಯಣಗೌಡ ಹೇಳಿದ್ದಾರೆ.
ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಮಾಫಿಯಾ ನಂಟು ಆರೋಪಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ ಬಂಧನ ಕುರಿತು ಮಾತನಾಡಿದ ಅವರು, ಚುನಾವಣಾ ಪ್ರಚಾರಕ್ಕೆ ನಾನು ರಾಗಿಣಿಯವರನ್ನು ಕರೆದಿಲ್ಲ. ನನ್ನ ಕೆಲ ಸ್ನೇಹಿತರು ಕರೆಸಿದ್ದರು. ಆದರೆ ರಾಗಿಣಿ ಹೀಗೆಂದು ಗೊತ್ತಿರಲಿಲ್ಲ ಎಂದಿದ್ದಾರೆ.
ರಾಗಿಣಿಯವರನ್ನು ನಮ್ಮ ಪಕ್ಷದವರು ಬೆಂಬಲಿಸಿಲ್ಲ. ಈ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಇನ್ನು ಶಿವಪ್ರಕಾಶ್ ಅವರ ಹೆಸರೂ ಪ್ರಕರಣದಲ್ಲಿ ಕೇಳಿಬರುತ್ತಿದೆ. ನನ್ನ ಚುನಾವಣಾ ಪ್ರಚಾರಕ್ಕೆ ಅವರನ್ನು ಕರೆಸಿಲ್ಲ. ಅವರಾಗೆ ಪ್ರಚಾರಕ್ಕೆ ಬಂದರೆ ನಾನೇನೂ ಮಾಡಲಾಗದು ಎಂದು ಹೇಳಿದರು.