ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಮಾಫಿಯಾ ನಂಟು ಪ್ರಕರಣದ ಆರೋಪಿ ನಟಿ ಸಂಜನಾ ಗಲ್ರಾಣಿ ಹಾಗೂ ರಾಗಿಣಿ ದ್ವಿವೇದಿಯವರಿಗೆ ಶಾಸಕ ಹಾಗೂ ಸಚಿವರ ಜತೆ ನಂಟಿದೆ ಎಂಬ ಮಾಹಿತಿ ಬಹಿರಂಗವಾಗಿದೆ.
ವಿಚಾರಣೆ ವೇಳೆ ಸಿಸಿಬಿಗೆ ಸಿಕ್ಕಿರುವ ನಟಿಯರ ಆಪ್ತರ ಲಿಸ್ಟ್ ನಲ್ಲಿ ಮೂರು ರಾಜಕಾರಣಿಗಳ ಹೆಸರಿದೆ. ಓರ್ವ ಬೆಂಗಳೂರಿನ ಹಾಲಿ ಶಾಸಕ, ಹಳೆ ಮೈಸೂರು ಭಾಗದ ಮಾಜಿ ಸಚಿವ ಹಾಗೂ ಹಾಲಿ ಸಚಿವರ ಜತೆಗೆ ನಿಕಟ ಸಂಪರ್ಕವಿದೆ ಎಂದು ಹೇಳಲಾಗುತ್ತಿದೆ.
ಇನ್ನು ನಟಿ ಸಂಜನಾ ಅವರ ಡ್ರಗ್ಸ್ ಪಾರ್ಟಿಗೆ ಪೊಲೀಸ್ ಅಧಿಕಾರಿಯೊಬ್ಬರು ರಕ್ಷಣೆ ನೀಡುತ್ತಿದ್ದರು. ಇದೇ ಕಾರಣಕ್ಕೆ ನಿಯಮ ಉಲ್ಲಂಘನೆ ಮಾಡಿ ತಡರಾತ್ರಿ ಯೂ ಪಾರ್ಟಿ ಆಯೋಜನೆ ಮಾಡಲಾಗುತ್ತಿತ್ತು ಎನ್ನಲಾಗಿದೆ. ಆ ಅಧಿಕಾರಿ ಈಗ ನಿವೃತ್ತರಾಗಿದ್ದು, ನಿವೃತ್ತಿ ಬಳಿಕವೂ ನಿರಂತರ ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ.