alex Certify ನಟಿ ಪ್ರಣಿತಾ ಹೆಸರಲ್ಲಿ ವಂಚನೆ: ಹಣ ಪಡೆದು ಎಸ್ಕೇಪ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಟಿ ಪ್ರಣಿತಾ ಹೆಸರಲ್ಲಿ ವಂಚನೆ: ಹಣ ಪಡೆದು ಎಸ್ಕೇಪ್

ಬೆಂಗಳೂರು: ನಟಿ ಪ್ರಣಿತಾ ಅವರನ್ನು ಪ್ರಚಾರ ರಾಯಭಾರಿಯನ್ನಾಗಿ ಮಾಡುತ್ತೇವೆ ಎಂದು ಹೇಳಿ ಎಸ್. ವಿ. ಗ್ರೂಪ್ ಅಂಡ್  ಡೆವಲಪರ್ಸ್ ಕಂಪನಿಗೆ ಲಕ್ಷಾಂತರ ರೂ. ವಂಚನೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಪ್ರಣಿತಾ ಅವರನ್ನು ಎಸ್. ವಿ. ಗ್ರೂಪ್ ಪ್ರಚಾರ ರಾಯಭಾರಿಯನ್ನಾಗಿ ಮಾಡುತ್ತೇನೆ ಎಂದು ಹೇಳಿ ಎಸ್. ವಿ. ಗ್ರೂಪ್ ನ ಮ್ಯಾನೇಜರ್ ಅವರನ್ನು ಮೊಹಮ್ಮದ್ ಜುನಾಯತ್ ಹಾಗೂ ವರ್ಷ ಎಂಬುವರು ಬೆಂಗಳೂರಿನ ಹೋಟೆಲ್ ಗೆ ಕರೆಸಿದ್ದಾರೆ. ಹೋಟೆಲ್ ಗೆ ಬಂದ ಮ್ಯಾನೇಜರ್ ಗೆ ಆರೋಪಿಗಳು ಮೊದಲು ಹಣ ನೀಡಿದರೆ ನಂತರ ಪ್ರಣಿತಾ ಬಂದು ಪ್ರಚಾರ ರಾಯಭಾರಿಯಾಗಲು ಒಪ್ಪಂದಕ್ಕೆ ಸಹಿ ಹಾಕುತ್ತಾರೆ ಎಂದು ಹೇಳಿದ್ದಾರೆ.

ಆರೋಪಿಗಳ ಮಾತು ನಂಬಿದ ಎಸ್. ವಿ. ಗ್ರೂಪ್ ಮ್ಯಾನೇಜರ್ 13.5 ಲಕ್ಷ ಹಣ ನೀಡಿದ್ದಾರೆ. ಹಣ ಪಡೆದು ರೂಂಗೆ ಹೋಗಿ ಬರುವುದಾಗಿ ಹೇಳಿ ಹೊರಟ ಜುನಾಯತ್ ಹಾಗೂ ವರ್ಷ ಎಸ್ಕೇಪ್ ಆಗಿದ್ದಾರೆ. ಇದೀಗ ಲಕ್ಷಾಂತರ ರೂ. ಕಳೆದುಕೊಂಡಿರುವ ಮ್ಯಾನೇಜರ್ ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...