ಆದಾಯವಿದ್ದರೂ ಸಹ ತಪ್ಪು ಮಾಹಿತಿ ನೀಡಿ ಕೆಲವರು ಬಿಪಿಎಲ್, ಅಂತ್ಯೋದಯ ಅನ್ನ ಸೇರಿದಂತೆ ವಿವಿಧ ಯೋಜನೆಗಳ ಲಾಭ ಪಡೆಯಲು ನಕಲಿ ಪಡಿತರ ಕಾರ್ಡ್ ಮಾಡಿಸಿದ್ದರು. ಇದಕ್ಕೆ ಕಡಿವಾಣ ಹಾಕಲು ಮುಂದಾಗಿರುವ ರಾಜ್ಯ ಸರ್ಕಾರ ಈವರೆಗೆ ಇಂತಹ 12.80 ಲಕ್ಷ ಪಡಿತರ ಕಾರ್ಡ್ ಗಳನ್ನು ಪತ್ತೆ ಹಚ್ಚಿದ್ದು ಅವುಗಳನ್ನು ರದ್ದುಪಡಿಸಿದೆ.
ಈ ಪೈಕಿ ಬಿಪಿಎಲ್ ಕಾರ್ಡ್ ಗಳ ಸಂಖ್ಯೆ 2,29,529 ಆಗಿದ್ದರೆ ಅಂತ್ಯೋದಯ ಅನ್ನ ಯೋಜನೆ ಕಾರ್ಡ್ ಗಳ ಸಂಖ್ಯೆ 9,749 ಆಗಿದೆ. ಇನ್ನೂ ಐಪಿಎಲ್ ಕಾರ್ಡ್ ಸಂಖ್ಯೆ 10.41 ಲಕ್ಷ ಆಗಿದ್ದು, ಒಟ್ಟು 12.80 ಲಕ್ಷ ಕಾರ್ಡುಗಳನ್ನು ರದ್ದುಪಡಿಸಲಾಗಿದೆ. ಈ ಹಿಂದೆ ಅನರ್ಹರಿಗೆ ತಾವು ಪಡೆದ ಕಾರ್ಡ್ ಹಿಂದಿರುಗಿಸಲು ಹಲವು ಅವಕಾಶ ನೀಡಿದ್ದರೂ ಸಹ ಬಹಳಷ್ಟು ಮಂದಿ ಇದಕ್ಕೆ ಮುಂದಾಗಿರಲಿಲ್ಲ.
ಸ್ವದೇಶಿ ಕೊವ್ಯಾಕ್ಸಿನ್ ಲಸಿಕೆಗೆ ದರ ನಿಗದಿ: ರಾಜ್ಯ ಸರ್ಕಾರಕ್ಕೆ 600 ರೂ., ಖಾಸಗಿ ಆಸ್ಪತ್ರೆಗೆ 1200 ರೂ.
ಸರ್ಕಾರದ ನಿಯಮಾವಳಿಗಳ ಪ್ರಕಾರ ಹೆಚ್ಚು ವರಮಾನ ಹೊಂದಿದವರು, ಸರ್ಕಾರಿ / ಅರೆ ಸರ್ಕಾರಿ ಉದ್ಯೋಗದಲ್ಲಿರುವವರು, 7:30 ಎಕರೆ ಭೂಮಿ ಹೊಂದಿದವರು, ಜಿಎಸ್ಟಿ ಕಟ್ಟುವವರು, ನಾಲ್ಕು ಚಕ್ರದ ವಾಹನ ಹೊಂದಿರುವವರು ಬಿಪಿಎಲ್ ಕಾರ್ಡ್ ಪಡೆಯಲು ಅರ್ಹರಾಗಿರುವುದಿಲ್ಲ. ಆದರೂ ಕೂಡ ಕೆಲವರು ನಕಲಿ ದಾಖಲೆ ನೀಡಿ ಇವುಗಳನ್ನು ಪಡೆದುಕೊಂಡಿದ್ದರು.