ಕೊರೊನಾ ಮಹಾಮಾರಿಯಿಂದಾಗಿ ಇಡೀ ದೇಶದ ಜನತೆ ಅನೇಕ ಸುಂದರ ಸಂದರ್ಭಗಳನ್ನು ಮಿಸ್ ಮಾಡಿಕೊಂಡಿದ್ದಾರೆ. ಫುಡ್ ಲವರ್ಸ್, ಟ್ರಾವೆಲಿಂಗ್ ಹೀಗೆ ಅನೇಕ ಹ್ಯಾಪಿ ಮೂಮೆಂಟ್ ಎಲ್ಲರಿಗೂ ಮಿಸ್ ಆಗಿದೆ. ಮಿಸ್ ಮಾಡಿಕೊಂಡ ಸ್ಥಳಗಳಲ್ಲಿ ನಂದಿ ಹಿಲ್ಸ್ ಕೂಡ ಒಂದು. ಆದರೆ ಇದೀಗ ಹಂತ ಹಂತವಾಗಿ ಲಾಕ್ ಡೌನ್ ಸಡಿಲಿಕೆ ಆಗುತ್ತಿದೆ. ಹೀಗಾಗಿ ಈ ರೀತಿ ಮಿಸ್ ಆದ ಜಾಗಗಳಿಗೆ ಹೋಗಬಹುದಾಗಿದೆ.
ಹೌದು, ನಂದಿ ಬೆಟ್ಟಕ್ಕೆ ಹೋಗುವವರಿಗೊಂದು ಮಹತ್ವದ ಮಾಹಿತಿ ಇಲ್ಲಿದೆ. ಸೆಪ್ಟೆಂಬರ್ 7 ರಿಂದ ನಂದಿ ಹಿಲ್ಸ್‌ಗೆ ಪ್ರವಾಸಿಗರು ಹೋಗಬಹುದು. ಅಲ್ಲಿನ ಜಿಲ್ಲಾಡಳಿತ ಪ್ರವಾಸಿಗರಿಗೆ ನಂದಿ ಬೆಟ್ಟಕ್ಕೆ ಹೋಗಲು ಅವಕಾಶ ಮಾಡಿಕೊಟ್ಟಿದೆ. ಕೊರೊನಾ ಹೆಚ್ಚಾಗಿ ಹರಡುತ್ತದೆ ಎಂಬ ಕಾರಣದಿಂದ ಬೆಟ್ಟಕ್ಕೆ ಪ್ರವಾಸಿಗರ ಪ್ರವೇಶವನ್ನು ನಿಷೇಧಿಸಲಾಗಿತ್ತು. ಆದರೆ ಇದೀಗ ಲಾಕ್‌ಡೌನ್ ಸಡಿಲಿಕೆ ಆಗಿರೋದ್ರಿಂದ ಅವಕಾಶ ಮಾಡಿಕೊಡಲಾಗಿದೆ.
ಇನ್ನು ಬೆಳಗ್ಗೆ 8 ರಿಂದ ಸಂಜೆ 5ರ ವರೆಗೆ ಮಾತ್ರ ನಂದಿ ಬೆಟ್ಟಕ್ಕೆ ಹೋಗಿ ಅಲ್ಲಿನ ಸೌಂದರ್ಯ ಸವಿಯೋದಿಕ್ಕೆ ಅವಕಾಶವಿದೆ. ಇದರ ಜೊತೆಗೆ ಮಾಸ್ಕ್ ಕಡ್ಡಾಯ ಮಾಡಲಾಗಿದೆ. ಯಾರೇ ಪ್ರವಾಸಿಗರು ಬೆಟ್ಟಕ್ಕೆ ಹೋಗುವಾಗ ಮಾಸ್ಕ್ ಕಡ್ಡಾಯವಾಗಿ ಧರಿಸಲೇಬೇಕು. ನಂದಿ ಬೆಟ್ಟದ ಪ್ರವೇಶದಲ್ಲಿರುವ ಚೆಕ್ ಪೋಸ್ಟ್‌ನಲ್ಲಿ ತಪಾಸಣೆ ಮಾಡಿ ಬಿಡಲಾಗುತ್ತದೆ. ಇಲ್ಲಿ ಮಾಸ್ಕ್ ಧರಿಸಿ ಗಿರಿಧಾಮಕ್ಕೆ ಹೋದ ನಂತರ ಮಾಸ್ಕ್ ಹಾಕದಿದ್ದರೆ ದಂಡ ವಿಧಿಸಲಾಗುತ್ತದೆ.