alex Certify ಧರ್ಮಸ್ಥಳದ ‘ಸಾಮೂಹಿಕ ವಿವಾಹ’ ಕಾರ್ಯಕ್ರಮಕ್ಕೆ ನೋಂದಾಯಿಸಿದ ವಧು-ವರರಿಗೆ ಇಲ್ಲಿದೆ ಮಹತ್ವದ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಧರ್ಮಸ್ಥಳದ ‘ಸಾಮೂಹಿಕ ವಿವಾಹ’ ಕಾರ್ಯಕ್ರಮಕ್ಕೆ ನೋಂದಾಯಿಸಿದ ವಧು-ವರರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಮಹಾಮಾರಿ ಕೊರೊನಾ ಎಲ್ಲರ ಬದುಕನ್ನು ಕಂಗೆಡಿಸಿದೆ. ಆರ್ಥಿಕವಾಗಿ ಬಡಜನರನ್ನು ಹೈರಾಣಾಗಿಸಿದ್ದು, ಇದರ ಮಧ್ಯೆ ಧರ್ಮಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುತ್ತಿದ್ದ ಉಚಿತ ಸಾಮೂಹಿಕ ವಿವಾಹ ಸಮಾರಂಭಗಳು ವೈವಾಹಿಕ ಬದುಕಿಗೆ ಕಾಲಿಡಲು ಬಯಸುವ ಬಡ ವಧು-ವರರಿಗೆ ನೆರವಾಗುತ್ತಿತ್ತು.

ಇದೀಗ ಸರ್ಕಾರದ ಮಾರ್ಗಸೂಚಿ ಅನ್ವಯ ಏಪ್ರಿಲ್ 29ರಂದು ಸಂಜೆ 6:48 ರ ಗೋಧೂಳಿ ಮುಹೂರ್ತದಲ್ಲಿ ನಡೆಯಬೇಕಿದ್ದ 49ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭವನ್ನು ರದ್ದುಗೊಳಿಸಲಾಗಿದೆ. ಈ ವಿಷಯವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರ ಆಪ್ತ ಕಾರ್ಯದರ್ಶಿ ಎ.ವಿ. ಶೆಟ್ಟಿ ತಿಳಿಸಿದ್ದಾರೆ.

ಷೇರು ಮಾರುಕಟ್ಟೆ ಕುಸಿತದ ಬೆನ್ನಲ್ಲೇ ಚಿನ್ನದ ಮೇಲೆ ಹೂಡಿಕೆ: ಆಭರಣ ಪ್ರಿಯರಿಗೆ ಬೆಲೆ ಏರಿಕೆ ‘ಶಾಕ್’

ಆದರೆ ಸಾಮೂಹಿಕ ವಿವಾಹ ಸಮಾರಂಭದಲ್ಲಿ ವಧು-ವರರಿಗೆ ನೀಡಲಾಗುತ್ತಿದ್ದ ನೆರವನ್ನು ಮುಂದುವರೆಸಲು ತೀರ್ಮಾನಿಸಲಾಗಿದ್ದು, ಹೆಸರು ನೋಂದಾಯಿಸಿಕೊಂಡಿರುವ ವಧು-ವರರಿಗೆ ಮಂಗಳ ಸೂತ್ರ, ಸೀರೆ, ರವಿಕೆ ಕಣ, ಧೋತಿ ಮೊದಲಾದ ವಸ್ತುಗಳನ್ನು ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯಕರ್ತರ ಮೂಲಕ ವಧುವಿನ ಮನೆಗೆ ತಲುಪಿಸಲಾಗುತ್ತದೆ.

ವಧು-ವರರು ಮಾರ್ಚ್ 29ರ ಗೋಧೂಳಿ ಲಗ್ನದಲ್ಲಿ ಅಥವಾ ತಮಗೆ ಅನುಕೂಲವಾದ ದಿನ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಿ ವೈವಾಹಿಕ ಬದುಕಿಗೆ ಕಾಲಿಡಬಹುದು ಎಂದು ತಿಳಿಸಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...