![](https://kannadadunia.com/wp-content/uploads/2021/03/theft15920551371595669916.jpg)
ಕಳ್ಳರು ದೇವಸ್ಥಾನದಲ್ಲಿದ್ದ ಸುಮಾರು 12 ಸಾವಿರ ರೂ. ಮೌಲ್ಯದ ಹಿತ್ತಾಳೆಯ 2 ಗಂಟೆಗಳನ್ನು ಕದ್ದಿರುವ ಘಟನೆ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಹೊಸಗುಂದದಲ್ಲಿ ನಡೆದಿದೆ.
ಹೊಸಗುಂದದ ಕಂಚಿ ಕಾಳಮ್ಮ ದೇವಾಲಯದ ಗಂಟೆಗಳನ್ನು ಕಳವು ಮಾಡಲಾಗಿದ್ದು, ಅರ್ಚಕ ಅಭಿಷೇಕ್ ಭಟ್ಟರು ಇದನ್ನು ಗಮನಿಸಿ ದೇವಸ್ಥಾನದ ಸಮಿತಿಯವರಿಗೆ ಮಾಹಿತಿ ನೀಡಿದ್ದರು.
ಶಾಕಿಂಗ್…! ಮಗುವಿನ ಕುತ್ತಿಗೆಗೆ ಚಾಕು ಹಿಡಿದು ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ
ಬಳಿಕ ದೇವಸ್ಥಾನ ಸಮಿತಿಯ ಎಚ್.ಡಿ. ಬಸವರಾಜಪ್ಪಗೌಡ ಸಾಗರ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.