ಬೆಂಗಳೂರು: ಜನಪ್ರಿಯ ಸಾಮಾಜಿಕ ಜಾಲತಾಣ ಟ್ವಿಟರ್ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಕಾಳಿ ದೇವಿಯ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶದ ಮೇರೆಗೆ ಎಫ್ ಐ ಆರ್ ದಾಖಲಿಸಲಾಗಿದೆ.
ಅರ್ಮಿನ್ ನವಾಬಿ ಎಂಬುವವರು ಕಾಳಿ ದೇವಿಯ ಬಗ್ಗೆ ಟ್ವಿಟರ್ ನಲ್ಲಿ ಅಶ್ಲೀಲ ಪೋಸ್ಟ್ ಹಾಕಿದ್ದರು. ಈ ಪೋಸ್ಟ್ ತೆಗೆಯುವಂತೆ ಕಿರಣ್ ಆರಾಧ್ಯ ಎಂಬುವವರು ಟ್ವಿಟರ್ ಗೆ ಮನವಿ ಮಾಡಿದ್ದರು. ಆದರೂ ಟ್ವಿಟರ್ ಸಂಸ್ಥೆ ಪೋಸ್ಟ್ ತೆಗೆದಿರಲಿಲ್ಲ. ಇದರಿಂದ ಕಿರಣ್ ನ್ಯಾಯಾಲಯದ ಮೊರೆ ಹೋಗಿದ್ದರು.
ಇದೀಗ ನ್ಯಾಯಾಲಯದ ಆದೇಶದಂತೆ ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ ಟ್ವಿಟರ್ ಸಂಸ್ಥೆ ವಿರುದ್ಧ ಎಫ್ ಐ ಆರ್ ದಾಖಲಿಸಲಾಗಿದೆ. ಪೋಸ್ಟ್ ಮಾಡಿದ್ದ ಅರ್ಮಿನ್ ನವಾಬಿ, ಟ್ವಿಟರ್ ಸಂಸ್ಥೆ ಸಿಇಓ ಜಾಕ್ ಡೋರ್ಸಿ ಸೇರಿದಂತೆ 7 ಜನರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.