ದೃಷ್ಟಿ ವಿಶೇಷಚೇತನ ವಿದ್ಯಾರ್ಥಿಗಳಿಗೆ ಟಾಕಿಂಗ್ ಲ್ಯಾಪ್ಟಾಪ್ ನೀಡಲು ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ತೀರ್ಮಾನ ಮಾಡಲಾಗಿದೆ. ಹೀಗಾಗಿ ಅರ್ಜಿ ಆಹ್ವಾನ ಮಾಡಲಾಗಿದ್ದು, ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಹೌದು, ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಗೆ ಬರುವ ವಿದ್ಯಾರ್ಥಿಗಳಿಗೆ ಟಾಕಿಂಗ್ ಲ್ಯಾಪ್ಟಾಪ್ ವಿತರಿಸಲಾಗುತ್ತಿದೆ. 2021ನೇ ಸಾಲಿನ ಎಸ್ಎಸ್ಎಲ್ಸಿ ಹಾಗೂ ಮೇಲ್ಪಟ್ಟ ತರಗತಿಗಳಲ್ಲಿ ಓದುತ್ತಿರುವ ದೃಷ್ಟಿ ವಿಶೇಷಚೇತನ ವಿದ್ಯಾರ್ಥಿಗಳಿಗೆ ಈ ಸೌಲಭ್ಯ ದೊರೆಯಲಿದೆ.
ಅರ್ಜಿ ಭರ್ತಿ ಮಾಡುವುದರ ಜೊತೆಗೆ ಶೇ.40ಕ್ಕಿಂತ ಹೆಚ್ಚು ಅಂಧತ್ವ ಹೊಂದಿರುವ ವಿಶೇಷಚೇತನರ ಗುರುತಿನ ಚೀಟಿಯ ಜೆರಾಕ್ಸ್, ವ್ಯಾಸಂಗ ಮಾಡುತ್ತಿರುವ ಪ್ರಮಾಣ ಪತ್ರ ಕೊಡಬೇಕು. ಅಲ್ಲದೆ ಅರ್ಜಿದಾರರು ಕನಿಷ್ಠ 10ವರ್ಷ ಕರ್ನಾಟಕದಲ್ಲಿ ವಾಸವಿರಬೇಕು. ಅರ್ಜಿದಾರರು ಇರುವ ವಾಸಸ್ಥಳದ ಪ್ರಮಾಣ ಪತ್ರ ಲಗತ್ತಿಸಬೇಕು.
ಇನ್ನು ಅರ್ಜಿದಾರರು ಜನವರಿ 20ರೊಳಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಹೊಸೂರು ರಸ್ತೆಯಲ್ಲಿರುವ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿ ತಿಳಿಯಬಹುದು. ಅಥವಾ 08029501812 ಸಂಖ್ಯೆಗೆ ಕರೆ ಮಾಡಿ ಸಂಪರ್ಕ ಮಾಡಬಹುದು.