ಕೊರೊನಾದಿಂದಾಗಿ ಹಬ್ಬ ಹರಿದಿನಗಳನ್ನು ಸರಳವಾಗಿಯೇ ಆಚರಿಸುವ ಪರಿಸ್ಥಿತಿ ಬಂದಿದೆ. ಸೋಂಕು ಹರಡುತ್ತದೆ ಎಂಬ ಕಾರಣಕ್ಕೆ ಧಾರ್ಮಿಕ ಕಾರ್ಯಕ್ರಮಗಳನ್ನು ಅದ್ಧೂರಿಯಾಗಿ ಮಾಡುವುದಕ್ಕೆ ಅವಕಾಶ ನೀಡಿಲ್ಲ. ಇದೀಗ ವಿಶ್ವವಿಖ್ಯಾತ ಮೈಸೂರು ದಸರಾ ಹಬ್ಬಕ್ಕೂ ಕೊರೊನಾ ಎಫೆಕ್ಟ್ ತಟ್ಟಿದೆ. ಕೊರೊನಾದಿಂದಾಗಿ ಸರಳವಾಗಿ ಹಬ್ಬ ಆಚರಣೆ ಮಾಡಲು ಸರ್ಕಾರ ತೀರ್ಮಾನ ಮಾಡಿಕೊಂಡಿದೆ.
ದಸರಾ ಅಂದಾಕ್ಷಣ ಎಲ್ಲರಿಗೂ ನೆನಪಾಗೋದು ಗಜಪಡೆಯ ಗಾಭೀರ್ಯ್ಯ ನಡೆ. ಅಂಬಾರಿ ಹೊತ್ತ ಗಜಪಡೆ ರಸ್ತೆಯಲ್ಲಿ ಹೆಜ್ಜೆ ಹಾಕುತ್ತಿದ್ದರೆ ಅದನ್ನು ನೋಡೋದಿಕ್ಕೆ ಎರಡು ಕಣ್ಣು ಸಾಲದು. ಆದರೆ ಈ ವರ್ಷ ಇದೆಲ್ಲದಕ್ಕೂ ಕೊರೊನಾ ಅಡ್ಡಿಯಾಗಿದೆ. ಈ ವರ್ಷ ಕೇವಲ 5 ಆನೆಗಳು ಮಾತ್ರ ದಸರಾದಲ್ಲಿ ಭಾಗಿಯಾಗುತ್ತಿವೆ. ಈ ವರ್ಷ ಅರ್ಜುನನ ಬದಲು ಅಭಿಮನ್ಯು ಅಂಬಾರಿ ಹೊರಲಿದ್ದಾನೆ.
ಇನ್ನು ದಸರಾದಲ್ಲಿ ಭಾಗಿಯಾಗುತ್ತಿರುವ 5 ಆನೆಗಳಿಗೂ ಕೋವಿಡ್ ಟೆಸ್ಟ್ ಮಾಡಿಸಲಾಗುತ್ತಿದೆ. ಮನುಷ್ಯರಿಂದ ಸೋಂಕು ಆನೆಗಳಿಗೆ ತಗುಲಬಹುದು ಎಂಬ ಕಾರಣಕ್ಕೆ ಟೆಸ್ಟ್ ಕಡ್ಡಾಯ ಮಾಡಲಾಗಿದೆ. ಇನ್ನು ಈ ಆನೆಗಳ ಮಾವುತರಿಗೂ ಕೋವಿಡ್ ತಪಾಸಣೆ ಮಾಡಿಸಲಾಗುತ್ತಿದೆ. ಅಷ್ಟೆ ಅಲ್ಲ ದಸರಾ ಮುಗಿಸಿ ಆನೆಗಳು ವಾಪಸ್ಸಾಗುವವರೆಗೂ ಆರೋಗ್ಯ ತಪಾಸಣೆ ಮಾಡಲಾಗುತ್ತದೆ.