ಮಹಾರಾಷ್ಟ್ರ ಮೂಲದ ದಂಪತಿಯಿಂದ ಹಣ ದೋಚಿದ್ದ ಮೂವರು ದರೋಡೆಕೋರರನ್ನು ಬಂಧಿಸಿರುವ ವಿಜಯಪುರದ ಅಲಮೇಲ ಠಾಣೆ ಪೊಲೀಸರಿಗೆ ಈಗ ಕೊರೊನಾ ಭಯ ಶುರುವಾಗಿದೆ.
ಬಂಧಿತ ಮೂವರು ಆರೋಪಿಗಳ ಪೈಕಿ ಇಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎನ್ನಲಾಗಿದ್ದು, ಹೀಗಾಗಿ ಆರೋಪಿಗಳ ಜೊತೆ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದ ಇಬ್ಬರು ಪಿಎಸ್ಐ ಹಾಗೂ 14 ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ.
ಕೊರೊನಾ ಸೋಂಕು ಪೀಡಿತ ಇಬ್ಬರು ಆರೋಪಿಗಳನ್ನು ಜಿಲ್ಲಾ ಕೇಂದ್ರ ಕಾರಾಗೃಹದಿಂದ ಕೋವಿಡ್ 19 ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.