ರಾಜ್ಯದಲ್ಲಿ ಕೊರೊನಾ ಮಹಾಮಾರಿ ಅಬ್ಬರಿಸುತ್ತಿದ್ದು, ಕೆಲ ದಿನಗಳಿಂದ ಪ್ರತಿದಿನ ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾಗುತ್ತಿರುವುದು ಸಾಮಾನ್ಯವಾಗಿದೆ. ಅದರಲ್ಲೂ ರಾಜ್ಯ ರಾಜಧಾನಿ ಬೆಂಗಳೂರಿನ ಜನತೆ ಕೊರೊನಾ ಆರ್ಭಟಕ್ಕೆ ತತ್ತರಿಸಿ ಹೋಗಿದ್ದಾರೆ.
ಜನಸಾಮಾನ್ಯರಿಂದ ಹಿಡಿದು ಜನಪ್ರತಿನಿಧಿಗಳವರೆಗೆ ಈ ಸೋಂಕು ವ್ಯಾಪಕವಾಗತೊಡಗಿದ್ದು, ಈಗಾಗಲೇ ಕೆಲ ಶಾಸಕರು ಹಾಗೂ ಸಂಸದೆಯೊಬ್ಬರು ಸೋಂಕು ಪೀಡಿತರಾಗಿದ್ದಾರೆ. ಇದರ ಮಧ್ಯೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಹತ್ವದ ತೀರ್ಮಾನ ಕೈಗೊಂಡಿದ್ದಾರೆ.
ಸದ್ಯಕ್ಕೆ ಯಾವ ಜಂಜಾಟವೂ ಬೇಡವೆಂದು ನಿರ್ಧರಿಸಿರುವ ಅವರು, ತಮ್ಮ ಪುತ್ರ ಶಾಸಕ ಡಾ. ಯತೀಂದ್ರ ಅವರೊಂದಿಗೆ ಮೈಸೂರು ತಾಲೂಕಿನ ಟಿ ಕಾಟೂರಿನಲ್ಲಿರುವ ತೋಟದ ಮನೆಯಲ್ಲಿ ಸ್ವಯಂ ಕ್ವಾರಂಟೈನ್ ಗೆ ಒಳಗಾಗಿದ್ದಾರೆ ಎಂದು ತಿಳಿದುಬಂದಿದೆ.