ಧಾರವಾಡ: ರಾಜ್ಯಾದ್ಯಂತ ಭಾರಿ ಮಳೆಯಾಗುತ್ತಿದ್ದು, ನದಿಗಳು ಅಪಾಯದಮಟ್ಟ ಮೀರಿ ಹರಿಯುತ್ತಿದೆ. ಇಂತಹ ಸಂದರ್ಭದಲ್ಲಿ ಕೆಎಸ್ಆರ್ ಟಿಸಿ ಬಸ್ ಚಾಲಕನೊಬ್ಬ ತುಂಬಿ ಹರಿಯುತ್ತಿದ್ದ ಸೇತುವೆ ಮೇಲೆಯೇ ಬಸ್ ಚಲಾಯಿಸಿ ಉದ್ಧಟತನ ಮೆರೆದಿದ್ದಾನೆ.
ರಾತ್ರಿಯಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ನದಿ, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದ್ದು, ಸೇತುವೆಗಳು ಜಲಾವೃತಗೊಂಡಿವೆ. ಇನಾಮಹೊಂಗಲ ಮತ್ತು ಹಾರೊಬೆಳವಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಕೂಡ ಸಂಪೂರ್ಣ ಜಲಾವೃತಗೊಂಡಿದೆ. ಈ ನಡುವೆ ಸವದತ್ತಿಯಿಂದ ಧಾರವಾಡಕ್ಕೆ ಬರುತ್ತಿದ್ದ ಕೆಎಸ್ ಆರ್ ಟಿಸಿ ಬಸ್ ಚಾಲಕ ಈ ಸೇತುವೆ ಮೇಲೆ ಬಸ್ ಓಡಿಸಲು ಮುಂದಾಗಿದ್ದಾನೆ. ಸೇತುವೆ ಮಧ್ಯೆ ಬರುತ್ತಿದ್ದಂತೆಯೇ ಬಸ್ ನೀರಿನ ಮಧ್ಯೆಯೇ ನಿಂತು ಬಿಟ್ಟಿದೆ.
ಗ್ರಾಮಸ್ಥರು ಬಸ್ ಚಾಲಕನಿಗೆ ಬಸ್ ನ್ನು ಅಲ್ಲೇ ಬಿಟ್ಟು ಬರುವಂತೆ ಹೇಳಿದರೂ ಕೇಳದೇ ಬಸ್ ಚಾಲಕ ಹರಸಾಹಸಪಟ್ಟು ದಡ ಸೇರಿಸಿದ್ದಾನೆ. ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.