ಕೊರೊನಾ ಮಹಾಮಾರಿ ವಕ್ಕರಿಸಿಕೊಂಡಿರುವ ಈ ಸಂದರ್ಭದಲ್ಲಿ ಹೊರಗಡೆಯಿಂದ ಹಣ್ಣು – ತರಕಾರಿ ತಂದ ವೇಳೆ ಹಾಗೂ ಹಣ್ಣು – ತರಕಾರಿ ಫಸಲು ಚೆನ್ನಾಗಿ ಬರಲೆಂಬ ಕಾರಣಕ್ಕೆ ರಾಸಾಯನಿಕ ಬಳಸುವುದರಿಂದ ಇದು ಆರೋಗ್ಯಕ್ಕೂ ಹಾನಿಕರವಾಗಿರುವುದರಿಂದ ಇವುಗಳನ್ನು ಬಳಸುವ ಮುನ್ನ ತೊಳೆಯಲು ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತೇವೆ.
ಆದರೂ ಕೂಡ ಸಂಪೂರ್ಣವಾಗಿ ಸುರಕ್ಷಿತವಾಗಿದೆಯೇ ಇಲ್ಲವೋ ಎಂಬ ಆತಂಕ ಕಾಡುತ್ತದೆ. ಇದನ್ನು ದೂರ ಮಾಡಲೆಂದೇ ಬೆಂಗಳೂರಿನ ಹೆಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಉತ್ಪನ್ನವೊಂದನ್ನು ಆವಿಷ್ಕರಿಸಿದ್ದು ಇದರ ಮೂಲಕ ಹಣ್ಣು – ತರಕಾರಿ ತೊಳೆಯುವುದು ಬಲು ಸುಲಭವಾಗಿದೆ.
ಸಂಶೋಧನಾ ಸಂಸ್ಥೆಯ ಪ್ರಧಾನ ವಿಜ್ಞಾನಿ ಡಾ. ದೇವಿ ಶರ್ಮಾ 5 ವರ್ಷಗಳ ಕಾಲ ಸಂಶೋಧನೆ ನಡೆಸಿ ಹರ್ಬಿ ವಾಷ್ ಎಂಬ ಈ ಉತ್ಪನ್ನವನ್ನು ಆವಿಷ್ಕರಿಸಿದ್ದು, 10 ಗ್ರಾಂ ಪುಡಿ ಹೊಂದಿರುವ ಈ ಪ್ಯಾಕ್ ಗೆ 12 ರೂಪಾಯಿ ದರ ನಿಗದಿ ಮಾಡಲಾಗಿದೆ. 1 ಲೀಟರ್ ನೀರಿಗೆ 2 ಗ್ರಾಂ ಹರ್ಮಿ ವಾಷ್ ಪುಡಿಯನ್ನು ಹಾಕಿ ಕಲಕಿ ನಂತರ ಇದಕ್ಕೆ ಹಣ್ಣು – ತರಕಾರಿ ಹಾಕಿ 15 ಸೆಕೆಂಡ್ ನಂತರ ಮಾಮೂಲಿ ನೀರಿನಲ್ಲಿ ತೊಳೆದು ಬಳಸಬಹುದಾಗಿದೆ.