ಗ್ರಾಮೀಣ ಭಾಗದ ಜನತೆ ಜನನ ಮತ್ತು ಮರಣ ಪ್ರಮಾಣ ಪತ್ರಗಳನ್ನು ಪಡೆಯುವ ಸಲುವಾಗಿ ಈವರೆಗೆ ತಹಶೀಲ್ದಾರ್ ಕಚೇರಿಗೆ ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಅಲೆದಾಟ ನಡೆಸಬೇಕಿತ್ತು. ಈಗ ಅದಕ್ಕೆ ಕಡಿವಾಣ ಬೀಳಲಿದೆ.
ಹೌದು, ಸರ್ಕಾರ ಜನನ ಮತ್ತು ಮರಣ ಪ್ರಮಾಣ ಪತ್ರ ನೀಡುವ ಅಧಿಕಾರವನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ನೀಡಿದ್ದು, ರಾಜ್ಯದ 6102 ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಈ ಕಾರ್ಯ ನಿರ್ವಹಿಸಲಿದ್ದಾರೆ.
ಮನೆಯಲ್ಲಿ ಮಗು ಜನಿಸಿದಾಗ ಅಥವಾ ಯಾರಾದರೂ ಮೃತಪಟ್ಟ ಸಂದರ್ಭದಲ್ಲಿ ಈವರೆಗೆ ತಹಸೀಲ್ದಾರ್ ಅವರಿಗೆ ವರದಿ ತಲುಪಿದ ಬಳಿಕ ಪ್ರಮಾಣಪತ್ರ ನೀಡಲಾಗುತ್ತಿತ್ತು. ಇದೀಗ ಆ ಅಧಿಕಾರ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ನೀಡಲಾಗಿದೆ.