ಉತ್ತರ ಕನ್ನಡ ಜಿಲ್ಲೆಯ ಸಂಸದ ಅನಂತಕುಮಾರ್ ಹೆಗಡೆ ಅವರಿಗೆ ವ್ಯಕ್ತಿಯೊಬ್ಬ ಸೋಮವಾರ ತಡರಾತ್ರಿ ಕರೆ ಮಾಡಿ ಜೀವ ಬೆದರಿಕೆ ಹಾಕಿರುವ ಘಟನೆ ನಡೆದಿದೆ.
ಸುಮಾರು 2 ಗಂಟೆ ಸುಮಾರಿಗೆ ಅನಂತಕುಮಾರ್ ಹೆಗಡೆ ಅವರ ನಿವಾಸದ ಸ್ಥಿರ ದೂರವಾಣಿಗೆ ಕರೆ ಮಾಡಿದ ಈ ವ್ಯಕ್ತಿ, ಕರೆ ಸ್ವೀಕರಿಸಿದ ಅನಂತಕುಮಾರ್ ಅವರಿಗೆ ಉರ್ದು ಮಿಶ್ರಿತ ಹಿಂದಿ ಭಾಷೆಯಲ್ಲಿ ಜೀವ ಬೆದರಿಕೆ ಒಡ್ಡಿದ್ದಾನೆಂದು ಹೇಳಲಾಗಿದೆ.
ಕೊರೊನಾ 2ನೇ ಅಲೆ: ನಿರ್ಣಾಯಕವಾಗಲಿದೆ ಮುಂದಿನ ನಾಲ್ಕು ವಾರ
ಇದೀಗ ಅನಂತಕುಮಾರ್ ಹೆಗಡೆ ಅವರ ಆಪ್ತ ಕಾರ್ಯದರ್ಶಿ ಸುರೇಶ್ ಶೆಟ್ಟಿ ಶಿರಸಿಯ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.