ತಜ್ಞ ವೈದ್ಯರು, ವೈದ್ಯಾಧಿಕಾರಿ ಹಾಗೂ ದಂತ ಆರೋಗ್ಯಾಧಿಕಾರಿಗಳಿಗೆ ಕ್ರಿಸ್ ಮಸ್ ಹಬ್ಬಕ್ಕೆ ಭರ್ಜರಿ ಗಿಫ್ಟ್ ನೀಡಿದೆ ರಾಜ್ಯ ಸರ್ಕಾರ. ಅವರ ವಿಶೇಷ ಭತ್ಯೆಗಳನ್ನು ಪರಿಷ್ಕರಿಸಿ ಆದೇಶ ಹೊರಡಿಸಲಾಗಿದೆ. ಕೊರೊನಾ ಸಂಕಷ್ಟದ ನಡುವೆಯೂ ಜೀವ ಪಣಕ್ಕಿಟ್ಟು ದುಡಿಯುತ್ತಿರುವ ವೈದ್ಯರಿಗೆ ಭತ್ಯೆ ಪರಿಷ್ಕರಣೆ ಮಾಡಿದೆ ಸರ್ಕಾರ.
ಹೌದು, ತಜ್ಞ ವೈದ್ಯರು, ವೈದ್ಯಾಧಿಕಾರಿ ಹಾಗೂ ದಂತ ಆರೋಗ್ಯಾಧಿಕಾರಿಗಳಿಗೆ ಸಚಿವ ಸುಧಾಕರ್ ಭರವಸೆ ನೀಡಿದ್ದರು. ಅದರಂತೆ ವಿಶೇಷ ಭತ್ಯೆಗಳನ್ನು ಪರಿಷ್ಕರಿಸಿ ಆದೇಶ ಹೊರಡಿಸಲಾಗಿದೆ. ಈ ಆದೇಶದ ಪ್ರಕಾರ 2020 ರ ಸೆಪ್ಟೆಂಬರ್ 1 ರಿಂದ ವಿಶೇಷ ಭತ್ಯೆಗಳು ಜಾರಿಗೆ ಬರುವಂತೆ ಆದೇಶಿಸಲಾಗಿದೆ.
ಇನ್ನು ಈ ಪರಿಷ್ಕರಣೆ ಪಟ್ಟಿಯನ್ನು ನೋಡೋದಾದ್ರೆ,
0 ರಿಂದ 6 ವರ್ಷ ಸೇವೆ ಸಲ್ಲಿಸಿದ ಎಂಬಿಬಿಎಎಸ್/ಬಿಡಿಎಸ್ ವಿದ್ಯಾರ್ಹತೆ ಇರುವವರಿಗೆ ಮಾಸಿಕ 21,000 ರೂ.ನಿಂದ 30,500 ರೂ.ಗೆ ಹೆಚ್ಚಳ
ಸ್ನಾತಕೋತ್ತರ ಪದವಿ/ಡಿಪ್ಲೊಮಾ ವಿದ್ಯಾರ್ಹತೆ ಇರುವವರಿಗೆ ಮಾಸಿಕ 42,600 ರೂ.ನಿಂದ 55,500 ರೂ.ಗೆ ಹೆಚ್ಚಳ
ಸೂಪರ್ ಸ್ಪೆಷಾಲಿಟಿ ವಿದ್ಯಾರ್ಹತೆ ಇರುವವರಿಗೆ ಮಾಸಿಕ 50,800 ರೂ.ನಿಂದ 64,500 ರೂ.ಗೆ ಹೆಚ್ಚಳ
6 ರಿಂದ 13 ವರ್ಷ ಸೇವೆ ಸಲ್ಲಿಸಿದ ಎಂಬಿಬಿಎಸ್/ಬಿಡಿಎಸ್ ಅರ್ಹತೆ ಹೊಂದಿದವರಿಗೆ ಮಾಸಿಕ 22,000 ರೂ.ನಿಂದ 37,500 ರೂ.ಗೆ ಹೆಚ್ಚಳ
ಸ್ನಾತಕೋತ್ತರ ಪದವಿ/ಡಿಪ್ಲೊಮಾ ವಿದ್ಯಾರ್ಹತೆ ಇರುವವರಿಗೆ ಮಾಸಿಕ 43,700 ರೂ.ನಿಂದ 64,500 ರೂ.ಗೆ ಹೆಚ್ಚಳ
ಸೂಪರ್ ಸ್ಪೆಷಾಲಿಟಿ ವಿದ್ಯಾರ್ಹತೆ ಇರುವವರಿಗೆ ಮಾಸಿಕ 52,100 ರೂ.ನಿಂದ 73,500 ರೂ.ಗೆ ಹೆಚ್ಚಳ
13 ರಿಂದ 20 ವರ್ಷ ಸೇವೆ ಸಲ್ಲಿಸಿದ ಎಂಬಿಬಿಎಸ್/ಬಿಡಿಎಸ್ ಅರ್ಹತೆ ಹೊಂದಿದವರಿಗೆ ಮಾಸಿಕ 23,000 ರೂ.ನಿಂದ 44,500 ರೂ.ಗೆ ಹೆಚ್ಚಳ
ಸ್ನಾತಕೋತ್ತರ ಪದವಿ/ಡಿಪ್ಲೊಮಾ ವಿದ್ಯಾರ್ಹತೆ ಇರುವವರಿಗೆ ಮಾಸಿಕ 44,800 ರೂ.ನಿಂದ 73,500 ರೂ.ಗೆ ಹೆಚ್ಚಳ
ಸೂಪರ್ ಸ್ಪೆಷಾಲಿಟಿ ವಿದ್ಯಾರ್ಹತೆ ಇರುವವರಿಗೆ ಮಾಸಿಕ 58,400 ರೂ.ನಿಂದ 83,500 ರೂ.ಗೆ ಹೆಚ್ಚಳ
20 ರಿಂದ 25 ವರ್ಷ ಸೇವೆ ಸಲ್ಲಿಸಿದ ಎಂಬಿಬಿಎಸ್/ಬಿಡಿಎಸ್ ಅರ್ಹತೆ ಹೊಂದಿದವರಿಗೆ ಮಾಸಿಕ 23,000 ರೂ.ನಿಂದ 52,500 ರೂ.ಗೆ ಹೆಚ್ಚಳ
ಸ್ನಾತಕೋತ್ತರ ಪದವಿ/ಡಿಪ್ಲೊಮಾ ವಿದ್ಯಾರ್ಹತೆ ಇರುವವರಿಗೆ ಮಾಸಿಕ 44,800 ರೂ.ನಿಂದ 83,500 ರೂ.ಗೆ ಹೆಚ್ಚಳ
ಸೂಪರ್ ಸ್ಪೆಷಾಲಿಟಿ ವಿದ್ಯಾರ್ಹತೆ ಇರುವವರಿಗೆ ಮಾಸಿಕ 58,400 ರೂ.ನಿಂದ 93,500 ರೂ.ಗೆ ಹೆಚ್ಚಳ
25 ವರ್ಷಕ್ಕಿಂತ ಹೆಚ್ಚು ವರ್ಷ ಸೇವೆ ಸಲ್ಲಿಸಿದ ಎಂಬಿಬಿಎಸ್/ಬಿಡಿಎಸ್ ಅರ್ಹತೆ ಹೊಂದಿದವರಿಗೆ ಮಾಸಿಕ 23,000 ರೂ.ನಿಂದ 60,500 ರೂ.ಗೆ ಹೆಚ್ಚಳ
ಸ್ನಾತಕೋತ್ತರ ಪದವಿ/ಡಿಪ್ಲೊಮಾ ವಿದ್ಯಾರ್ಹತೆ ಇರುವವರಿಗೆ ಮಾಸಿಕ 44,800 ರೂ.ನಿಂದ 93,500 ರೂ.ಗೆ ಹೆಚ್ಚಳ
ಸೂಪರ್ ಸ್ಪೆಷಾಲಿಟಿ ವಿದ್ಯಾರ್ಹತೆ ಇರುವವರಿಗೆ ಮಾಸಿಕ 58,400 ರೂ.ನಿಂದ 1,03,500 ರೂ.ಗೆ ಹೆಚ್ಚಳ