ಉತ್ತರ ಕನ್ನಡ: ತಂಡ ಕಟ್ಟಿಕೊಂಡು ಹೆದ್ದಾರಿಯಲ್ಲಿ ಪ್ರಯಾಣಿಕರನ್ನು ದರೋಡೆ ಮಾಡಲು ಹೊಂಚು ಹಾಕುತ್ತಿದ್ದ ಆರೋಪಿಯೊಬ್ಬನನ್ನು ಕಾರವಾರ ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ಹಳಿಯೂರ ಹೊಸ್ಕೆರಿ ನಿವಾಸಿ ಅಸಿಫ್ ಅಬ್ದುಲ್ ರೆಹಮಾನ್ ಬಂಧಿತ ಆರೋಪಿ.
ಈತ ಏಳು ಜನರ ತಂಡದೊಂದಿಗೆ ಶಿಕಾರಿಪುರದಿಂದ ಕಾರಿನ ಮೂಲಕ ಕಾರವಾರಕ್ಕೆ ಬಂದಿದ್ದು, ಕಾರವಾರ – ಗೋವಾ ಹೆದ್ದಾರಿಯಲ್ಲಿ ನಡುರಾತ್ರಿ ಸಂಚರಿಸುವ ಪ್ರಯಾಣಿಕರಿಂದ ಚಿನ್ನಾಭರಣ, ನಗದು ದೋಚಲು ಸಂಚು ನಡೆಸಿದ್ದ ಎಂದು ಹೇಳಲಾಗಿದೆ.
ಹಿನ್ನೀರು ಲಾಂಚ್ ಸಿಬ್ಬಂದಿ ಮೇಲೆ ಪ್ರವಾಸಿಗರಿಂದ ಹಲ್ಲೆ
ಅನುಮಾನಾಸ್ಪದವಾಗಿ ನಿಂತಿದ್ದ ಇವರುಗಳನ್ನು ಬೆಳಗಿನ ಜಾವ ಗಮನಿಸಿದ ಪೊಲೀಸರು ಬೆನ್ನಟ್ಟಿದ್ದು ಈ ವೇಳೆ 6 ಜನರು ಪರಾರಿಯಾಗಿದ್ದಾರೆ. ಬಂಧಿತ ಆರೋಪಿಯಿಂದ ದೊಣ್ಣೆ, ಎರಡು ಕತ್ತಿ, ನೈಲಾನ್ ಹಗ್ಗ, ಕಾರದಪುಡಿ ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ. ಪರಾರಿಯಾಗಿರುವ ಆರು ಮಂದಿ ಆರೋಪಿಗಳ ಪತ್ತೆ ಕಾರ್ಯದಲ್ಲಿ ಪೊಲೀಸರು ತೊಡಗಿದ್ದಾರೆ.