ದಾವಣಗೆರೆ: ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ನಂಟಿದೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ತನಿಖೆಯೂ ನಡೆಯುತ್ತಿದೆ. ಯಾರೆಲ್ಲ ಇದ್ದಾರೆ ಎಂಬುದು ತನಿಖೆಯಿಂದ ಹೊರಬರಲಿ. ವಿಚಾರಣೆ ನಡೆಯುತ್ತಿರುವ ವೇಳೆ ಈ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದ್ದಾರೆ.
ದಾವಣಗೆರೆಯಲ್ಲಿ ಮಾತನಾಡಿದ ನಟ ದರ್ಶನ್, ಡ್ರಗ್ಸ್ ಮಾಫಿಯಾ ಸ್ಯಾಂಡಲ್ ವುಡ್ ಗೆ ಮಾತ್ರವಲ್ಲ ಕರ್ನಾಟಕಕ್ಕೇ ಒಂದು ಕಳಂಕ. ಒಂದು ವಿಚಾರವೆಂದರೆ ಒಂದು ಕ್ಲಾಸ್ ನಲ್ಲಿ ರ್ಯಾಂಕ್ ಸ್ಟುಡೆಂಟು ಇರ್ತಾರೆ. ಜೀರೋ ಮಾರ್ಕ್ಸ್ ತೆಗೆದುಕೊಳ್ಳುವವರೂ ಇರ್ತಾರೆ. ಹಾಗಂತ ಇಡೀ ಕ್ಲಾಸಿಗೇ ಕ್ಲಾಸೇ ಜೋರೋ ಎನ್ನಲು ಸಾಧ್ಯವೇ. ಹಾಗೇ…..ಯಾರೋ ಒಬ್ಬಿಬ್ಬರೆದ್ದರೆ ಇಡೀ ಚಿತ್ರರಂಗವೇ ಸರಿಯಿಲ್ಲ ಎನ್ನಲಾಗದು ಅಂತಹ ವ್ಯಕ್ತಿಗಳಿದ್ದರೆ ತನಿಖೆಯಿಂದ ಹೊರ ಬರಲಿ ಎಂದರು.
ನಾನು ಕಳೆದ 20-25 ವರ್ಷಗಳಿಂದ ಚಿತ್ರರಂಗದಲ್ಲಿದ್ದೇನೆ. ನನ್ನ ಪ್ರಕಾರ ಡ್ರಗ್ಸ್ ನಂಟಿರುವ ಯಾರನ್ನೂ ನಾನು ನೋಡಿಲ್ಲ ಎಂದು ಹೇಳಿದರು.
ಇನ್ನು ಯುವ ನಟನ ಸಾವಿನ ಬಗ್ಗೆ ಆರೋಪ ಮಾಡುವುದು ಸರಿಯಲ್ಲ. ಮೃತ ವ್ಯಕ್ತಿಯ ಬಗ್ಗೆ ಆರೋಪಗಳನ್ನು ಮಾಡುವುದು ಸರಿಯಲ್ಲ. ಒಂದು ವೇಳೆ ಅವರ ವಿರುದ್ಧ ಆರೋಪ ಸಾಬೀತಾದರೆ ಮೃತಪಟ್ಟ ವ್ಯಕ್ತಿಯನ್ನು ತಂದು ಶಿಕ್ಷಿಸಲು ಸಾಧ್ಯವೇ? ಯುವ ನಟ ಮೃತಪಟ್ಟು ಮೂರು ತಿಂಗಳಾಗಿದೆ. ಸಾವನ್ನಪ್ಪಿರುವ ಅವರ ಬಗ್ಗೆ ಆರೋಪ ಮಾಡುವುದರಿಂದ ಏನು ಪ್ರಯೋಜನ? ಎದು ಪ್ರಶ್ನಿಸಿದ್ದಾರೆ.