ಕೊಪ್ಪಳ: ರಾಜ ಮಹಾರಾಜರ ಕಾಲದಿಂದಲೂ ಡ್ರಗ್ಸ್ ಇದೆ. ಇದೀಗ ಡ್ರಗ್ಸ್ ನಲ್ಲಿ ಹಲವಾರು ವೆರೈಟಿಗಳಿವೆ. ಡ್ರಗ್ಸ್ ಪ್ರತಿಯೊಬ್ಬರಿಗೂ ಅಗತ್ಯ. ಆದರೆ ಡ್ರಗ್ಸ್ ಪ್ರಕರಣದಲ್ಲಿ ನಟಿಯರ ಹೆಸರು ಕೇಳಿ ಬರುತ್ತಿರುವುದು ನೋವುಂಟು ಮಾಡಿದೆ ಎಂದು ಶಾಸಕ ಅಮರೇಗೌಡ ಬಯ್ಯಾಪುರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಬಯ್ಯಾಪುರ, ಸಿನಿಮಾದವರು ಡ್ರಗ್ಸ್ ಗಳನ್ನು ಹೆಚ್ಚು ಸೇವನೆ ಮಾಡುತ್ತಿರುವುದು ತಪ್ಪು. ಇತ್ತೀಚಿನ ದಿನಗಳಲ್ಲಿ ಡ್ರಗ್ಸ್ ಪ್ರಕರಣದಲ್ಲಿ ನಟಿಯರ ಹೆಸರು ಕೇಳಿ ಬರುತ್ತಿದೆ. ಈ ಮೂಲಕ ನಟಿಯರ ತೇಜೋವಧೆ ಮಾಡಲಾಗುತ್ತಿದೆ. ಈ ವಿಚಾರ ನನ್ನ ಮನಸ್ಸಿಗೂ ತುಂಬಾ ನೋವು ತಂದಿದೆ. ಡ್ರಗ್ಸ್ ಪ್ರಕರಣದಲ್ಲಿ ನಟಿಯರು ಭಾಗಿಯಾಗಿದ್ದರೆ ಅವರಿಗೆ ಗೌಪ್ಯವಾಗಿ ಶಿಕ್ಷೆ ನೀಡಲಿ ಎಂದರು.
ವೈಯಕ್ತಿಕವಾಗಿ ರಾಜಕಾರಣಿಗಳೂ ಡ್ರಗ್ಸ್ ತೆಗೆದುಕೊಳ್ಳುತ್ತಾರೆ. ಯಾವ ರಾಜಕಾರಣಿಗಳೂ ಸರಿಯಿಲ್ಲ. ಯಾರೋ ಒಬ್ಬರು ಮಹಾತ್ಮಾ ಗಾಂಧಿ ಥರ ಇರುತ್ತಾರೆ. ನಶೆ ನಂಟಿರದ ಮನುಷ್ಯರಿಲ್ಲ. ತಿಳಿದವರು ಕಡಿಮೆ ಮಾಡ್ತಾರೆ. ತಿಳಿಯದವರು ಹೆಚ್ಚು ಮಾಡುತ್ತಾರೆ ಎಂದು ಹೇಳಿದ್ದಾರೆ.