ಬೆಳಗಾವಿ: ಸಿಎಂ ರಾಜಕೀಯ ಕಾರ್ಯದರ್ಶಿ ಎನ್.ಆರ್. ಸಂತೋಷ್ ಆತ್ಮಹತ್ಯೆ ಯತ್ನ ಪ್ರಕರಣ ಸಂಬಂಧ ಡಿ.ಕೆ. ಶಿವಕುಮಾರ್ ಮಾಡಿರುವ ಆರೋಪಗಳು ಮುಟ್ಟಾಳತನದ ಹೇಳಿಕೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆಶಿ ವಿಡಿಯೋ ಆರೋಪ ಸತ್ಯಕ್ಕೆ ದೂರವಾದದ್ದು, ಒಂದು ವೇಳೆ ವಿಡಿಯೋ ಇಟ್ಟುಕೊಂಡು ಹೆದರಿಸಿದ್ದರೆ ಆ ವಿಡಿಯೋ ಇವರ ಬಳಿಯೂ ಇರಬೇಕಿತ್ತಲ್ಲವೇ? ಬ್ಲಾಕ್ ಮೇಲ್ ಮಾಡುತ್ತಿರುವ ಸಚಿವ ಹಾಗೂ ಎಂಎಲ್ಸಿ ಯಾರು ಎಂಬುದನ್ನು ಹೇಳಲಿ. ಎನ್.ಆರ್. ಸಂತೋಷ್ ಆತ್ಮಹತ್ಯೆಗೆ ಯತ್ನಿಸಿದರು ಎಂದು ಅದಕ್ಕೆ ರಹಸ್ಯ ವಿಡಿಯೋ ಕಾರಣ ಎಂದು ಹೇಳುತ್ತಾ ರಾಜ್ಯದ ಜನರ ದಿಕ್ಕು ತಪ್ಪಿಸುವ ಕೆಟ್ಟ ರಾಜಕಾರಣ ಮಾಡುವುದು ಸರಿಯಲ್ಲ ಎಂದರು.
ಕಾಂಗ್ರೆಸ್ ದೇಶದಲ್ಲಿ ಸಂಪೂರ್ಣ ನೆಲಕಚ್ಚಿದೆ. ಹಾಗಾಗಿ ಅವರು ರಾಜಕಾರಣಕ್ಕಾಗಿ ಏನೇನೋ ಮಾತನಾಡುತ್ತಾ, ಆರೋಪಗಳನ್ನು ಮಾಡುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾಗಿ ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಕೀಳು ಮಟ್ಟದ ಹೇಳಿಕೆ ನೀದುವುದು ಸರಿಯಲ್ಲ ಎಂದು ಕಿದಿಕಾರಿದರು.