ಬೆಂಗಳೂರು: ಸಿಬಿಐ ದಾಳಿಗೆ ಹೆದರಬೇಕಿಲ್ಲ, ಪ್ರಾಮಾಣಿಕವಾಗಿದ್ದರೆ ಯಾವುದೇ ದಾಳಿಯನ್ನಾದರೂ ಎದುರಿಸಬೇಕು ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ನಿವಾಸದ ಮೇಲೆ ಸಿಬಿಐ ದಾಳಿ ವಿಚಾರವಾಗಿ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಇದು ರಾಜಕೀಯ ಪ್ರೇರಿತವೋ, ಅಲ್ಲವೋ ಎಂದು ನಾನು ಹೇಳಲಾರೆ. ಆದರೆ ಪ್ರಾಮಾಣಿಕರಾಗಿದ್ದರೆ ಎಂತಹ ತನಿಖೆಯನ್ನಾದರೂ ಎದುರಿಸಬೇಕು ಎಂದರು.
ತನಿಖೆ ನಂತರ ಸತ್ಯ ಹೊರಬರುತ್ತದೆ. ಸತ್ಯಕ್ಕೆ ಜಯ ಸಿಗಬೇಕು. ನಿಧಾನವಾದರೂ ಸತ್ಯ ಹೊರಬರಬೇಕು ಎಂದು ಮಾರ್ಮಿಕವಾಗಿ ಹೇಳುವ ಮೂಲಕ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿದ್ದಾರೆ ಕುಮಾರಸ್ವಾಮಿ.