ಟಿಪ್ಪು ಬದಲು ಮತ್ತೊಂದು ಹೆಸರು ನಿಮ್ಮ ಬಾಯಿಂದ ಬರೋಲ್ವಲ್ಲಾ ಸಿದ್ದರಾಮಯ್ಯನವರೇ ಎಂದ ಪ್ರತಾಪ್ ಸಿಂಹ 29-07-2020 11:49AM IST / No Comments / Posted In: Karnataka, Latest News ಕೊರೊನಾ ಕಾರಣಕ್ಕೆ ಶಿಕ್ಷಣ ಇಲಾಖೆ ಶೈಕ್ಷಣಿಕ ಅವಧಿಯನ್ನು ಇಳಿಕೆ ಮಾಡಿದ್ದು, ಈ ಹಿನ್ನಲೆಯಲ್ಲಿ ಪಠ್ಯ ಪುಸ್ತಕದಲ್ಲಿ ಶೇ.30 ರಷ್ಟು ಪಠ್ಯಗಳನ್ನು ಇಳಿಕೆ ಮಾಡಲಾಗುತ್ತಿದೆ. ಹೀಗಾಗಿ 7 ನೇ ತರಗತಿ ವಿದ್ಯಾರ್ಥಿಗಳ ಪುಸ್ತಕದಲ್ಲಿದ್ದ ಟಿಪ್ಪು ಪಠ್ಯವನ್ನು ಕೈ ಬಿಡಲಾಗಿದ್ದು, ಇದು ಪ್ರತಿಪಕ್ಷ ಕಾಂಗ್ರೆಸ್ ವಿರೋಧಕ್ಕೆ ಕಾರಣವಾಗಿದೆ. ಇದರ ವಿರುದ್ದ ಹೋರಾಟ ನಡೆಸುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಜೊತೆಗೆ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಕೂಡಾ ಸರ್ಕಾರದ ನಡೆಗೆ ಆಕ್ರೋಶ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದರು. ಇದರ ಮಧ್ಯೆ ಇಂದು ಟ್ವೀಟ್ ಮಾಡಿರುವ ಮೈಸೂರು ಸಂಸದ ಪ್ರತಾಪ್ ಸಿಂಹ, “ಆ ಟಿಪ್ಪು ಬದಲು, ನಿಮಗೆ ವಿದ್ಯೆ ಕೊಟ್ಟ ಮೈಸೂರು ವಿಶ್ವವಿದ್ಯಾಲಯ, ಅನ್ನ ಕೊಟ್ಟು ಉಸಿರು ಉಳಿಸಿರುವ ಕನ್ನಂಬಾಡಿ ಕಟ್ಟೆ ಕಟ್ಟಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಬಗ್ಗೆ ಒಂದು ಅಧ್ಯಾಯ ಸೇರಿಸಿ ಅನ್ನೋ ಮಾತೇ ನಿಮ್ಮ ಬಾಯಿಂದ ಬರಲ್ವಲ್ಲಾ ಸಿದ್ದರಾಮಯ್ಯನವರೇ…” ಎಂದು ಟಾಂಗ್ ಕೊಟ್ಟಿದ್ದಾರೆ. ಆ ಟಿಪ್ಪು ಬದಲು, ನಿಮಗೆ ವಿದ್ಯೆ ಕೊಟ್ಟ ಮೈಸೂರು ವಿಶ್ವವಿದ್ಯಾಲಯ, ಅನ್ನ ಕೊಟ್ಟು ಉಸಿರು ಉಳಿಸಿರುವ ಕನ್ನಂಬಾಡಿ ಕಟ್ಟೆ ಕಟ್ಟಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಬಗ್ಗೆ ಒಂದು ಅಧ್ಯಾಯ ಸೇರಿಸಿ ಅನ್ನೋ ಮಾತೇ ನಿಮ್ಮ ಬಾಯಿಂದ ಬರಲ್ವಲ್ಲಾ ಸಿದ್ದರಾಮಯ್ಯನವರೇ… https://t.co/T6kJ2Z4p4V — Pratap Simha (Modi Ka Parivar) (@mepratap) July 29, 2020