
ಜೇಬಿನಲ್ಲಿದ್ದ ಮೊಬೈಲ್ ಸ್ಪೋಟಗೊಂಡ ಪರಿಣಾಮ ಬೈಕಿನಲ್ಲಿ ತೆರಳುತ್ತಿದ್ದ ಯುವಕ ಗಾಯಗೊಂಡು ಆಸ್ಪತ್ರೆ ಸೇರಿದ ಘಟನೆ ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಕುಪ್ಪಗಡ್ಡೆ ಗ್ರಾಮದ ಬಳಿ ನಡೆದಿದೆ.
ತವನಂದಿಯ 22 ವರ್ಷದ ಶರತ್ ಗಾಯಗೊಂಡ ಯುವಕನಾಗಿದ್ದು, ಈತ ಬೈಕಿನಲ್ಲಿ ಕುಪ್ಪಗಡ್ಡೆಗೆ ತೆರಳುತ್ತಿದ್ದ ವೇಳೆ ಜೇಬಿನಲ್ಲಿದ್ದ ಮೊಬೈಲ್ ಸ್ಪೋಟಗೊಂಡಿದೆ.
ಇದರಿಂದ ಗಾಬರಿಗೊಂಡ ಶರತ್ ನಿಯಂತ್ರಣ ಕಳೆದುಕೊಂಡು ಬೈಕಿನ ಸಮೇತ ಕೆರೆಗೆ ಬಿದ್ದಿದ್ದು, ಬಲ ತೊಡೆ ಭಾಗದಲ್ಲಿ ಗಾಯಗೊಂಡಿರುವ ಆತನನ್ನು ಈಗ ಸೊರಬ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.