ಇಂದು ಮಾಜಿ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರ 90ನೇ ಹುಟ್ಟುಹಬ್ಬವಾಗಿದ್ದು ಸಚಿವ ಬಿ.ಸಿ. ಪಾಟೀಲ್, ಸಾಮಾಜಿಕ ಜಾಲತಾಣವಾದ ಟ್ವಿಟ್ಟರ್ ನಲ್ಲಿ ಶುಭಕೋರಿದ್ದಾರೆ.
ಕನ್ನಡನಾಡು ಕಂಡ ಅಪ್ರತಿಮ ಜನನಾಯಕ, ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಜೆ. ಎಚ್. ಪಟೇಲ್ ಅವರ ಜನ್ಮದಿನದಂದು ಕೋಟಿ ಕೋಟಿ ನಮನಗಳು.
ಕರ್ನಾಟಕದ ರಾಜಕೀಯ ಕ್ಷೇತ್ರದಲ್ಲಿ ಒಬ್ಬ ಧೀಮಂತ ನಾಯಕನಾಗಿ ತಮ್ಮ ಛಾಪನ್ನು ಮೂಡಿಸಿದ್ದ ಅವರ ನೆನಪು ಸದಾ ನಮ್ಮೊಂದಿಗೆ ಇರಬಲ್ಲದು ಎಂದು ಬಿ.ಸಿ. ಪಾಟೀಲ್ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.