ಕೊರೊನಾದಿಂದಾಗಿ ಧಾರ್ಮಿಕ ಕೇಂದ್ರಗಳನ್ನು ಮುಚ್ಚಲಾಗಿತ್ತು. ಆದರೆ ಜೂನ್ 8 ರಿಂದ ತೆರೆಯೋದಿಕ್ಕೆ ಅವಕಾಶ ಮಾಡಲಾಗಿದೆ. ಹೀಗಾಗಿ ದೇವಸ್ಥಾನಗಳು ಚರ್ಚ್‌ಗಳು, ಮಸೀದಿಗಳಲ್ಲಿ ಸ್ವಚ್ಛತಾ ಕಾರ್ಯ ಆರಂಭವಾಗಿದೆ. ಹಾಗೂ ಬರುವ ಭಕ್ತಾದಿಗಳಿಗೆ ಬಾಕ್ಸ್ ಗಳನ್ನು ಬರೆಯಲಾಗಿದೆ.
ಇತ್ತ ಮಸೀದಿಗಳನ್ನು ಷರತ್ತು ಅನ್ವಯ ತೆರೆಯೋದಿಕ್ಕೆ ಅವಕಾಶ ನೀಡಲಾಗಿದೆ. ಹೀಗಾಗಿ ಸಮಸ್ತ ಕೇರಳ ಸುನ್ನಿ ಫೆಡರೇಷನ್, ಮಸೀದಿಗಳನ್ನು ತೆರೆಯೋದಕ್ಕೆ ತೀರ್ಮಾನ ಮಾಡಿದೆ. ಇನ್ನು ಆಯಾಯ ಜಿಲ್ಲಾ ಸಮಿತಿಗಳಿಗೆ ಷರತ್ತುಗಳನ್ನು ಪಾಲಿಸುವಂತೆ ಸೂಚನೆ ನೀಡಿದೆ.
ಅಂತರ ಕಾಯ್ದುಕೊಳ್ಳಬೇಕು, ಮಸೀದಿಗೆ ಬರುವವರು ಪ್ರವೇಶಿಸುವ ಮುನ್ನ ಸೋಪ್ ನಿಂದ ಕೈತೊಳೆದೇ ಒಳಗೆ ಬಂದು ನಮಾಜ್ ಮಾಡಬೇಕು. ತೊಳೆದು ಒಣಗಿಸಿದ ಬಟ್ಟೆ ಅಥವಾ ಚಾಪೆಗಳನ್ನು ನಮಾಜ್ ಗೆ ಬಳಸಬೇಕು, ಪರಿಚಿತರಿಗೆ ಮಾತ್ರ ಮಸೀದಿಯೊಳಗೆ ಪ್ರವೇಶ. ಯಾತ್ರಿಕರಿಗೆ ಅಥವಾ ಅಪರಿಚಿತರಿಗೆ ಮಸೀದಿಯ ಹೊರಗೆ ನಮಾಜ್‌ಗೆ ವ್ಯವಸ್ಥೆ ಮಾಡಬೇಕು. ಬಾಂಗ್ ಗೆ ಐದು ನಿಮಿಷ ಮೊದಲು ಮಸೀದಿ ತೆರೆಯಬೇಕು. ಜಮಾತ್‌ನ 15 ನಿಮಿಷದೊಳಗೆ ಮುಗಿಸಬೇಕು ಎಂದು ಸೂಚನೆ ನೀಡಿದೆ.