ನಾಲ್ಕು ದಿನಗಳ ಹಿಂದೆಯಷ್ಟೇ ಸಚಿವ ಪ್ರಭು ಚವ್ಹಾಣ್ರ ಕೈಲಿದ್ದ ಬೀದರ್ ಉಸ್ತುವಾರಿಯನ್ನ ಸಚಿವ ಅರವಿಂದ ಲಿಂಬಾವಳಿಗೆ ನೀಡಿದ್ದ ರಾಜ್ಯ ಸರ್ಕಾರ ಇದೀಗ ತನ್ನ ಆದೇಶವನ್ನ ಮತ್ತೊಮ್ಮೆ ಬದಲಾಯಿಸಿದೆ. ಈ ಮೂಲಕ ಬೀದರ್ ಉಸ್ತುವಾರಿ ಪುನಃ ಸಚಿವ ಪ್ರಭು ಚವ್ಹಾಣ್ರ ಕೈ ಸೇರಿದೆ.
ಸಿಎಂ ಯಡಿಯೂರಪ್ಪ ಸೂಚನೆಯಂತೆ ಬೀದರ್ ಜಿಲ್ಲೆಯ ಉಸ್ತುವಾರಿಯನ್ನ ಪುನಃ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ರಿಗೆ ನೀಡಲಾಗಿದೆ. ಅರಣ್ಯ, ಕನ್ನಡ ಹಾಗೂ ಸಂಸ್ಕೃತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿಗೆ ಕೋಲಾರ ಜಿಲ್ಲೆಯ ಉಸ್ತುವಾರಿ ನೀಡಲಾಗಿದೆ. ಇನ್ನು ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆ ಸಚಿವ ಆರ್. ಶಂಕರ್ಗೆ ಯಾದಗಿರಿ ಜಿಲ್ಲೆಯ ಉಸ್ತುವಾರಿಯನ್ನ ನೀಡಲಾಗಿದೆ.
2ನೇ ತಾರೀಖಿನಂದು ಸರ್ಕಾರ ಹೊರಡಿಸಿದ್ದ ಅಧಿಸೂಚನೆಯ ಪ್ರಕಾರ ಯಾದಗಿರಿ ಜಿಲ್ಲೆ ಉಸ್ತುವಾರಿಯನ್ನ ಪ್ರಭು ಚವ್ಹಾಣರಿಗೂ ಬೀದರ್ ಜಿಲ್ಲೆಯ ಉಸ್ತುವಾರಿ ಅರವಿಂದ ಲಿಂಬಾವಳಿಗೂ ಹಾಗೂ ಕೋಲಾರ ಜಿಲ್ಲೆಯ ಉಸ್ತುವಾರಿಯನ್ನ ಎಂಟಿಬಿ ನಾಗರಾಜುರಿಗೆ ನೀಡಲಾಗಿತ್ತು.