ಡ್ರಗ್ಸ್ ಪ್ರಕರಣದಲ್ಲಿ ಚಿರಂಜೀವಿ ಸರ್ಜಾ ಹೆಸರು ತಂದಿದ್ದ ಇಂದ್ರಜಿತ್ ಲಂಕೇಶ್ ಕ್ಷಮೆ ಕೋರಿದ್ದಾರೆ. ಸುದ್ದಿಗೋಷ್ಠಿ ನಡೆಸಿದ ಇಂದ್ರಜಿತ್ ಲಂಕೇಶ್ ಬಹಿರಂಗ ಕ್ಷಮೆ ಕೋರಿದ್ದಾರೆ. ಚಿರಂಜೀವಿ ಸರ್ಜಾ ಕುಟುಂಬದ ಮೇಲೆ ನನಗೆ ಗೌರವವಿದೆ ಎಂದಿದ್ದಾರೆ.
ಮೇಘನಾ ರಾಜ್ ನೋವಿನಿಂದ ಪತ್ರ ಬರೆದಿದ್ದರು. ಈಗ ಬಹಿರಂಗವಾಗಿ ಕ್ಷಮೆ ಕೇಳುತ್ತೇನೆ. ನನ್ನ ಹೇಳಿಕೆಯನ್ನು ವಾಪಸ್ ಪಡೆಯುತ್ತೇನೆಂದು ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ. ಇಂದ್ರಜಿತ್ ಲಂಕೇಶ್ ಡ್ರಗ್ಸ್ ಬಗ್ಗೆ ಮಾತನಾಡುವ ವೇಳೆ ಚಿರು ಮರಣೋತ್ತರ ಪರೀಕ್ಷೆ ಏಕೆ ನಡೆಸಿಲ್ಲವೆಂದು ಪ್ರಶ್ನಿಸಿದ್ದರು.
ಇದು ಎಲ್ಲರ ಆಕ್ರೋಶಕ್ಕೆ ಕಾರಣವಾಗಿತ್ತು. ಡ್ರಗ್ಸ್ ವಿಷ್ಯದಲ್ಲಿ ಚಿರು ಹೆಸರು ಬಂದಿರುವುದು ಕುಟಂಬಸ್ಥರಲ್ಲಿ ನೋವು ತಂದಿತ್ತು. ಈ ಬಗ್ಗೆ ಮೇಘನಾ ರಾಜ್ ನೋವಿನ ಪತ್ರ ಕೂಡ ಬರೆದಿದ್ದರು. ಪತಿ, ದಿವಂಗತ ಚಿರಂಜೀವಿ ಸರ್ಜಾ ಹೆಸರು ಬಂದಿರುವುದು ನೋವು ತಂದಿದೆ. ಪತಿ ಕಳೆದುಕೊಂಡು ಮಾನಸಿಕ ತೊಳಲಾಟದಲ್ಲಿದ್ದೇನೆ. ಈ ವೇಳೆ ಇಂದ್ರಜಿತ್ ಲಂಕೇಶ್ ಮತ್ತಷ್ಟು ನೋವು ತಂದಿದ್ದಾರೆ. ಅವರು ಬಹಿರಂಗ ಕ್ಷಮೆ ಕೇಳಬೇಕೆಂದು ಮೇಘನಾ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆದಿದ್ದರು.