ಶಿವಮೊಗ್ಗ: ಇತ್ತೀಚೆಗೆ ಕುವೆಂಪು ರಸ್ತೆಯಲ್ಲಿ ವಿದ್ಯುತ್ ಕಂಬ ಹತ್ತಿ ರಿಪೇರಿ ಮಾಡುವ ವೇಳೆ ವಿದ್ಯುತ್ ಶಾಕ್ ಹೊಡೆದು ತೀವ್ರ ಗಾಯಗೊಳಗಾಗಿದ್ದ ಪವರ್ ಮ್ಯಾನ್ ಉಮಾ ಶಂಕರ್ (42) ಇಂದು ನಿಧನ ಹೊಂದಿದ್ದಾರೆ.
ಅ.8 ರಂದು ಸಂಜೆ ಕುವೆಂಪು ರಸ್ತೆಯಲ್ಲಿ ಮೆಗ್ಗಾನ್ ಆಸ್ಪತ್ರೆಯ ವಿದ್ಯುತ್ ಲೈನ್‍ನಲ್ಲಿ ವಿದ್ಯುತ್ ಪ್ರಸಾರವಾಗುತ್ತಿರಲಿಲ್ಲ ಎಂಬ ಕಾರಣಕ್ಕೆ 11 ಕೆವಿ ವಿದ್ಯುತ್ ಕಂಬ ಹತ್ತಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ಉಮಾಶಂಕರ್ ಗೆ ವಿದ್ಯುತ್ ಶಾಕ್ ಹೊಡೆದಿದ್ದು, ಮುಖ, ಭುಜ, ಹೊಟ್ಟೆ ಭಾಗಗಳಲ್ಲಿ ತೀವ್ರ ಗಾಯಗಳಾಗಿತ್ತು. ಅಂದೇ ಮಣಿಪಾಲ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಸಾಗಿಸಲಾಗಿತ್ತು.
ಆದರೆ ಇಂದು ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೇ ಉಮಾಶಂಕರ್ ಸಾವನ್ನಪ್ಪಿದ್ದಾರೆ. ಮೃತ ಉಮಾಶಂಕರ್ ಪತ್ನಿ ಹಾಗೂ ಇಬ್ಬರ ಹೆಣ್ಣುಮಕ್ಕಳನ್ನು ಬಿಟ್ಟು ಅಗಲಿದ್ದಾರೆ.