ಚಾಮರಾಜನಗರದಲ್ಲಿ ಇರುವ ಯಳಂದೂರಿನಲ್ಲಿ ಗೌರೀಶ್ವರ ದೇವಾಲಯ ಇದೆ. ಈ ದೇವಾಲಯದ ಸೊಬಗು ಹಲವು ಪ್ರವಾಸಿಗರನ್ನು ಆರ್ಕಷಿಸುತ್ತಿದೆ. ದೇವಾಲಯವನ್ನು ಕ್ರಿ.ಶ.1450ರಲ್ಲಿ ಪಡಿನಾಡಿನ ದೊರೆ ಸಿಂಗದೇವ ಭೂಪ ಕಟ್ಟಿಸಿದ ಎನ್ನಲಾಗಿದೆ.
ದ್ರಾವಿಡ ಶೈಲಿಯಲ್ಲಿರುವ ಈ ದೇವಾಲಯದ ಮಹಾದ್ವಾರ 12 ಅಡಿಗಳಷ್ಟು ಎತ್ತರವಿದೆ. ಸುಂದರವಾದ ಕಲ್ಲಿನ ಬಳೆಗಳು, ಬ್ರಹ್ಮ, ವಿಷ್ಣು, ಮಹೇಶ್ವರ, ದಕ್ಷಿಣಾಮೂರ್ತಿ ಭೈರವ, ವೀರಭದ್ರ, ಗೋಪಾಲರ ವಿಗ್ರಹಗಳನ್ನು ಮನೋಹರವಾಗಿ ಕೆತ್ತಲಾಗಿದೆ. ಈ ದೇವಾಲಯದ ಮುಂದಿರುವ ಬಳೆಮಂಟಪವನ್ನು 1654ರಲ್ಲಿ ಮುದ್ದುರಾಜನು ಇದನ್ನು ಕಟ್ಟಿಸಿದನು.
ಇದು ಹಂಪೆಯ 27 ಕಲ್ಲಿನ ರಥವನ್ನು ಹೋಲುತ್ತದೆ. ಮಂಟಪದ ಮಧ್ಯಭಾಗದಲ್ಲಿ ಒಂದೇ ಕಲ್ಲಿನಿಂದ ಕಮಲದ ಮೊಗ್ಗನ್ನು ಬಿಡಿಸಿ ಮೇಲ್ಭಾಗದಲ್ಲಿ ಜೋಡಿಸಿರುವುದು ಸೊಗಸಾಗಿದೆ. ಮಂಟಪದ ಮೂಲೆಗಳನ್ನು ಬಳೆಗಳಿಂದ ಜೋಡಿಸಿರುವುದರಿಂದ ಇದಕ್ಕೆ ಈ ಹೆಸರು ಬಂದಿದೆ.
ವಿಶೇಷ ಎಂದರೆ ದೇವಾಲಯಕ್ಕೆ ಗೋಪುರವಿಲ್ಲ. ಚೋಳರ ಕಾಲದಲ್ಲಿ ನಿರ್ಮಾಣವಾದ ಈ ದೇವಾಲಯಕ್ಕೆ ಮೊದಲು ಮಂಟಪವನ್ನೇ ಕಟ್ಟಬಾರದು ಎಂದು ನಿರ್ಧರಿತವಾಗಿತ್ತು. ಅದರಂತೆ ಇಂದಿಗೂ ಅಲ್ಲಿ ಗೋಪುರವಿಲ್ಲ.