ಮೂರು ವರ್ಷಗಳ ಬಳಿಕ ಮತ್ತೆ ಗೋಲ್ಡನ್ ಚಾರಿಯಟ್ ಐಷಾರಾಮಿ ರೈಲು ಸಂಚಾರ ಮಾಡುತ್ತಿದೆ. 2020ರ ಜನವರಿಯಿಂದ ಸಂಚಾರ ಆರಂಭಿಸಬೇಕಿದ್ದ ಈ ರೈಲು 2021 ಜನವರಿಯಿಂದ ತನ್ನ ಸಂಚಾರ ಆರಂಭ ಮಾಡುತ್ತಿದೆ. ಇದೀಗ ಮುಂಗಡ ಟಿಕೆಟ್ ಕೂಡ ಬುಕ್ ಆಗುತ್ತಿವೆ.
ಹೌದು, ಗೋಲ್ಡನ್ ಚಾರಿಯಟ್ ಟ್ರೈನ್ ಮತ್ತೆ ಸಾರ್ವಜನಿಕರಿಗೆ ಸೇವೆ ನೀಡಲಿದೆ. ಪ್ರವಾಸಿ ತಾಣಗಳನ್ನು ನೋಡಲು ಪ್ಯಾಕೇಜ್ ವ್ಯವಸ್ಥೆ ಇದೆ. ಇದರಲ್ಲಿ ಎರಡು ಪ್ಯಾಕೇಜ್ ಕರ್ನಾಟಕದ ಪ್ರಸಿದ್ಧ ತಾಣಗಳನ್ನು ಒಳಗೊಂಡಿದೆ. ಇನ್ನೊಂದು ಪ್ಯಾಕೇಜ್‌ನಲ್ಲಿ ತಮಿಳುನಾಡು ಮತ್ತು ಕೇರಳ ರಾಜ್ಯದ ಸಂಚಾರ ಇದೆ. ಬೆಂಗಳೂರು ನಗರದಿಂದ ಈ ರೈಲು ಪ್ರವಾಸಿ ತಾಣಗಳಿಗೆ ಹೋಗಲಿದೆ.
ವಿಭಿನ್ನ ಹಾಗೂ ವಿವಿಧ ಐಷಾರಾಮಿ ಸೌಕರ್ಯಗಳನ್ನು ಹೊಂದಿರುವ ಗೋಲ್ಡನ್ ಚಾರಿಯಟ್ ರೈಲನ್ನು ಈ ಹಿಂದೆ ಐಆರ್‌ಸಿಟಿಸಿಗೆ ಹಸ್ತಾಂತರಿಸಲಾಗಿತ್ತು. ಇದೀಗ ಮತ್ತಷ್ಟು ಅಪ್ ಡೇಟ್ ಮಾಡಲಾಗಿದೆ. ಇದರಲ್ಲಿ ಲಿವಿಂಗ್ ರೂಂ ಹಾಗೂ ಬಾತ್ ರೂಂಗಳು ಅತ್ಯಾಧುನಿಕವಾಗಿವೆ. ಸ್ಮಾರ್ಟ್ ಟಿವಿ, ಜಿಮ್, ರೆಸ್ಟೋರೆಂಟ್‌ಗಳು ಹೀಗೆ ಸಾಕಷ್ಟು ಸೌಲಭ್ಯಗಳು ಇವೆ.