alex Certify ಗಮನಿಸಿ: ಕರ್ತವ್ಯಲೋಪದಡಿ ಅಮಾನತುಗೊಳಿಸುವ ನಿಯಮಗಳಲ್ಲಿ ಬದಲಾವಣೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಮನಿಸಿ: ಕರ್ತವ್ಯಲೋಪದಡಿ ಅಮಾನತುಗೊಳಿಸುವ ನಿಯಮಗಳಲ್ಲಿ ಬದಲಾವಣೆ..!

ಭ್ರಷ್ಟಾಚಾರ ಅಥವಾ ಕರ್ತವ್ಯ ಲೋಪದಡಿ ಸರ್ಕಾರಿ ನೌಕರರನ್ನು ಅಮಾನತು ಮಾಡಿದ ನಂತರ 6 ತಿಂಗಳೊಳಗೆ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು. ಅಥವಾ ಅಮಾನತುಗೊಂಡ ನೌಕರನ ವಿರುದ್ಧ 6 ತಿಂಗಳೊಳಗೆ ವಿಚಾರಣೆ ಆರಂಭವಾಗಬೇಕು.

ಹೌದು, ಅಮಾನತು ಕ್ರಮವನ್ನು ಇನ್ನಷ್ಟು ಕಠಿಣ ಮಾಡಿ ನಿಯಮಗಳನ್ನು ತಿದ್ದುಪಡಿ ಮಾಡಿ ಆದೇಶ ಹೊರಡಿಸಿದೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ. ಸರ್ಕಾರಕ್ಕೆ ಆಗುತ್ತಿದ್ದ ಅನಗತ್ಯ ಆರ್ಥಿಕ ಹೊರೆ ಹಾಗು ನೌಕರರಿಗೆ ಕಿರುಕುಳ ತಪ್ಪಿಸುವ ನಿಟ್ಟಿನಲ್ಲಿ ಈ ತಿದ್ದುಪಡಿಯನ್ನು ಮಾಡಲಾಗಿದೆ.

ಇನ್ನು ಯಾವುದೇ ಸರ್ಕಾರಿ ನೌಕರರನ್ನು ಅಮಾನತು ಮಾಡಿದ ನಂತರ ಆರು ತಿಂಗಳೊಳಗೆ ದೋಷಾರೋಪ ಪಟ್ಟಿಯನ್ನು ಸಲ್ಲಿಸಬೇಕು. ಇಲ್ಲದೇ ಹೋದರೆ ಆರು ತಿಂಗಳ ನಂತರ ಆ ಅಮಾನತು ಆದೇಶ ಸ್ವಯಂ ಆಗಿ ರದ್ದಾಗಲಿದೆ. ಅಲ್ಲದೆ ಈ ಅಮಾನತು ರದ್ದಾದ ನಂತರ ನೌಕರನನ್ನು ಮರು ಸೇವೆಗೆ ನಿಯುಕ್ತಿ ಮಾಡಬಹುದು. ಇದನ್ನು ಸಕ್ಷಮ ಪ್ರಾಧಿಕಾರಿ ನಿರ್ಧರಿಸಬಹುದು. ಹಾಗೆಯೇ ಆತ ಹಿಂದೆ ಕಾರ್ಯನಿರ್ವಹಿಸಿದ್ದ ಹುದ್ದೆಗೆ ಆ ನೌಕರನನ್ನು ನೇಮಿಸುವಂತಿಲ್ಲ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...